ಭಾನುವಾರ ಅಂತರಂಗ ಬಹಿರಂಗ ತಂಡದ ಎರಡು ಹಾಸ್ಯ ನಾಟಕ ಪ್ರದರ್ಶನ

drama
Published on

ಬೆಂಗಳೂರು : ಅಂತರಂಗ ಬಹಿರಂಗ ತಂಡದಿಂದ ಇಂದು (ಭಾನುವಾರ) ಎರಡು ಹಾಸ್ಯ ನಾಟಕಗಳ ಪ್ರದರ್ಶನ ಆಯೋಜಿಲಾಗಿದೆ.

ಎನ್‌ಆರ್ ಕಾಲೋನಿಯ ಡಾ.ಸಿ.ಅಶ್ವತ್ಥ್ ಕಲಾಭವನದಲ್ಲಿ ಸಂಜೆ 4ಕ್ಕೆ ನಾಗವೇಣಿ ರಂಗನ್ ರಚನೆ, ವನಿತಾ ರಂಗಾಯಣ ನಿರ್ದೇಶನದ ‘ಬಾಯಿ ತುಂಬಾ ನಕ್ಬಿಡಿ’ ನಾಟಕ ಹಾಗೂ ಸಂಜೆ 7ಕ್ಕೆ ಭೀಷ್ಮರಾಮಯ್ಯ ರಚನೆ ಮತ್ತು ನಿರ್ದೇಶನದ ‘ಯಥಾ ಪ್ರಕಾರ’ ನಾಟಕ ಪ್ರದರ್ಶನ ನಡೆಯಲಿದೆ.

ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್‌ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net