ಎಲ್ಲ ಸಂಸ್ಕೃತಿಯು ಜಗತ್ತಿನ ಪರಂಪರೆಯ ಭಾಗ; ಶ್ರೀ ಶ್ರೀ ರವಿಶಂಕರ್ ಗುರೂಜಿ ಅಭಿಮತ

bhav
Published on

ಬೆಂಗಳೂರು: ಯಾವುದೇ ಸಂಸ್ಕೃತಿ, ಧರ್ಮ ಅಥವಾ ನಾಗರಿಕತೆ ನಶಿಸಿದರೆ ಅದರಿಂದ ಈ ಜಗತ್ತು ಬಡವಾಗುತ್ತದೆ. ಪ್ರತಿಯೊಂದು ಸಂಸ್ಕೃತಿಯೂ ಕೂಡ ಜಗತ್ತಿನ ಪರಂಪರೆಯ ಒಂದು ಭಾಗವಾಗಿರುವುದರಿಮದ ಎಲ್ಲ ಸಂಸ್ಕೃತಿಯನ್ನು ಸಂರಕ್ಷಿಸಿ, ಉಳಿಸಬೇಕು ಎಂದು ಆರ್ಟ್ ಆ್ ಲಿಂವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ. ಆರ್ಟ್ ಆ್ ಲಿವಿಂಗ್ ಆವರಣದಲ್ಲಿ ಆಯೋಜಿಸಿದ್ದ ಭಾವ್ 2025 ರಲ್ಲಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕುಂಭದಲ್ಲಿ ಎಲ್ಲಾ ಜಾತಿಗಳ ಜನರು, ವಿವಿಧ ದೈವಗಳನ್ನು ಪ್ರಾರ್ಥಿಸುವವರು ಒಂದಾಗಿ ಸೇರಿದ್ದಾರೆ ಅದು ಧಾರ್ಮಿಕ ಕುಂಭವಾಗಿದ್ದರೆ; ಇಲ್ಲಿ ಭಾವ್ 2025ರ ಹೆಸರಿನಲ್ಲಿ ಕಲಾವಿದರ, ಕಲಾ ಸಾಧಕರ ಕುಂಭ ನಡೆಯುತ್ತಿದೆ ಎಂದರು. ವಿವಿಧೆಡೆಯಿಂದ ಆಗಮಿಸಿದ್ದ ಶ್ರೇಷ್ಠ ಕಲಾವಿದರನ್ನು, ಯುವ ಪ್ರತಿಭೆಗಳನ್ನು ಹಾಗೂ ವಿದ್ವಾಂಸರು ಪ್ರದರ್ಶಿಸಿದ ಕಲೆಯನ್ನು ಸಚಿವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ವರ್ಲ್ಡ್ ಫೋರಂ ಫಾರ್ ಆರ್ಟ್ಸ್ ಆ್ಯಂಡ್ ಕಲ್ಚರ್ಸ್ ನಿರ್ದೇಶಕಿ ಶ್ರೀವಿದ್ಯಾ ವರ್ಚಸ್ವಿ, ಪದ್ಮಶ್ರೀ ಮಂಜಮ್ಮ ಜೋಗತಿ, ಪದ್ಮಶ್ರೀ ಓಂಪ್ರಕಾಶ್ ಶರ್ಮಾ, ಪದ್ಮಶ್ರೀ ಉಮಾ ಮಹೇಶ್ವರಿ, ಆಂಧ್ರದ ಹರಿಕಥಾ ದಿಗ್ಗಜ ಚಿತ್ರವೀಣಾ ಎನ್.ರವಿಕಿರಣ್ ಮತ್ತಿತರರಿದ್ದರು. ಜೀವಮಾನ ಸಾಧನೆಗಾಗಿ 94 ವರ್ಷ ವಯಸ್ಸಿನ ವೀಣಾ ವಿದ್ವಾನ್ ಆರ್. ವಿಶ್ವೇಶ್ವರನ್, ಮೃದಂಗ ವಿದ್ವಾನ್ ಎ. ಆನಂದ್, ಯಕ್ಷಗಾನ ನಿಪುಣರಾದ ಬನ್ನಂಜೆ ಸುವರ್ಣ, ಗರ್ಭ ಹಾಡುಗಾರ ಅತುಲ್ ಪುರೋಹಿತ್ ಮತ್ತಿತರರಿಗೆ 2025ನೇ ಸಾಲಿನ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಂತ್ರಮುಗ್ಧರನ್ನಾಗಿಸಿದ ಪ್ರದರ್ಶನ

500 ಕ್ಕೂ ಹೆಚ್ಚಿನ ಕಲಾವಿದರು, 30 ವೈವಿಧ್ಯಮಯ ನೃತ್ಯ ಹಾಗೂ ಸಂಗೀತ ಪ್ರಕಾರಗಳು,ನೇರ ಕಲಾ ಪ್ರದರ್ಶನದ ಮೂಲಕ ಜಗತ್ತಿನ 180 ರಾಷ್ಟ್ರಗಳಲ್ಲಿ ಪ್ರಸಾರವಾಯಿತು. ಭಾರತದ ಶ್ರೀಮಂತ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಲು ಆಯೋಜಿಸಲಾಗಿದ್ದ ಭಾವ್ 2025 ರಲ್ಲಿ ವೈವಿದ್ಯಮಯ ಪ್ರದರ್ಶನಗಳು ನೋಡುಗರನ್ನು ಮೂಕವಿಸ್ಮಿತಗೊಳಿಸದವು. ಪಶ್ಚಿಮ ಬಂಗಾಳದ ಮಂಗಳಮುಖಿ ಕಲಾವಿದರ ತಂಡವು ಪ್ರದರ್ಶಿಸಿದ ಸಪ್ತಮಾತೃಕೆಯರ ನೃತ್ಯ ಮತ್ತು ಆರ್ಟ್ ಆಫ್ ಲಿವಿಂಗ್‌ನ ‘ಔಟ್ ಆಫ್ ಬಾಕ್ಸೃ್’ ಮ್ಯೂಸಿಕ್ ಬ್ಯಾಂಡ್ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಕಾವ್ಯ ಮುರಳೀಧರನ್ ಮತ್ತು ತಂಡದವರಿಂದ ಭರತನಾಟ್ಯ ಪ್ರದರ್ಶನ, ಕಥಕ್ ನೃತ್ಯಗಾರ್ತಿ ಮನೀಷ ಸಾಥೆ ತಂಡದ ಕಥಕ್, ಎನ್. ರವಿಕಿರಣ್ ತಂಡದ ರಾಮಭಜನೆ, ಅತುಲ್ ಪುರೋಹಿತ್ ಜಾನಪದ ಸಂಗೀತ ಹೀಗೆ ಭಾವ್ ಕಾರ್ಯಕ್ರಮ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ವರ್ಣರಂಜಿತವಾಗಿ ಮೂಡಿಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net