ಕರ್ತವ್ಯನಿರತ ಸೈನಿಕ ಹೃದಯಾಘಾತಕ್ಕೀಡಾಗಿ ಸಾವು, ಇಂದು ಹುಬ್ಬಳ್ಳಿಗೆ ಪಾರ್ಥಿವ ಶರೀರ ತಲುಪುವ ನಿರೀಕ್ಷೆ..

Soldier
Published on

ಹುಬ್ಬಳ್ಳಿ: ಇತ್ತೀಚೆಗೆ ಯುವಕರು, ಕಟ್ಟುಮಸ್ತಾಗಿರುವವರು, ನಿಯಮಿತವಾಗಿ ಕಸರತ್ತು ನಡೆಸುತ್ತಿರುವವರು ಕೂಡ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಆತಂಕವನ್ನು ಮೂಡಿಸಿದೆ. ಈ ನಡುವೆ ಕರ್ತವ್ಯನಿರತ ಯೋಧರೊಬ್ಬರೂ ಹೃದಯಾಘಾತಕ್ಕೆ ಬಲಿಯಾದ ಪ್ರಕರಣವೊಂದು ನಡೆದಿದೆ.

ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದ ಗಂಗಾಧರಯ್ಯ ಹಿರೇಮಠ (49) ಹೃದಯಾಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡ ಸೈನಿಕ. ಇವರು ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬಿಎಸ್​ಎಫ್​ ಬೆಟಾಲಿಯನ್​ 138ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು 28 ವರ್ಷಗಳ ಹಿಂದೆಯೇ ದೇಶ ಕಾಯುವ ಕಾಯಕಕ್ಕೆ ಸೇರಿದ್ದರು. ಆದರೆ ಇವರು ಪಶ್ಚಿಮಬಂಗಾಳದ್ ಕುಚ್​ ಬಿಹಾರ್​ನಲ್ಲಿ ಕರ್ತವ್ಯನಿರತರಾಗಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಇಂದು ರಾತ್ರಿ ಸ್ವಗ್ರಾಮ ರೊಟ್ಟಿಗವಾಡಕ್ಕೆ ಇವರ ಪಾರ್ಥಿವ ಶರೀರ ತಲುಪುವ ನಿರೀಕ್ಷೆ ಇದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಸೈನಿಕ ಗಂಗಾಧರಯ್ಯ ಅವರ ಅಂತ್ಯಕ್ರಿಯೆ ನಡೆಸಲು ತಾಲೂಕು ಆಡಳಿತ ಸಜ್ಜಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net