ಕುಷ್ಟಗಿ: ಪಟ್ಟಣದ ಮದ್ದಾನೇಶ್ವರ ಜಾತ್ರಾ ನಿಮಿತ್ತ ಏ.3ರಂದು ರಥೋತ್ಸವ ಜರುಗಲಿದೆ.
ಇದನ್ನೂ ಓದಿ: ವಿಜೃಂಭಣೆಯ ಶ್ರೀ ವೀರಭದ್ರ ಸ್ವಾಮಿ ಉತ್ಸವ
ಲಿಂ.ಕರಿಬಸವ ಶಿವಾಚಾರ್ಯ ಸ್ವಾಮೀಜಿಗಳ 50ನೇ ಪುಣ್ಯ ಸ್ಮರಣೋತ್ಸವ, ಲಿಂ.ಕರಿಬಸವ ಚರಮೂರ್ತಿಗಳ 37ಪುಣ್ಯಾರಾಧನೆ, ಕರಿಬಸವ ಶಿವಾಚಾರ್ಯ ಸ್ವಾಮೀಜಿ 23ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ, ಅಡ್ಡಪಲ್ಲಕ್ಕಿ ಉತ್ಸವ,
ಸಾಮೂಹಿಕ ವಿವಾಹ, ಸುಮಂಗಲಿಯರಿಗೆ ಉಡಿ ತುಂಬುವುದು ಹಾಗೂ ಇಷ್ಟಲಿಂಗ ಧಾರಣ ಕಾರ್ಯಕ್ರಮಗಳು ನಡೆಯಲಿವೆ. ಮಾ.26ರಿಂದ ಸಂಜೆ 7ಕ್ಕೆ ನಾಲತವಾಡ ವೀರೇಶ್ವರ ಜೀವನ ದರ್ಶನ ಪುರಾಣ ಪ್ರವಚನ ಜರುಗಲಿದೆ. ಜಾತ್ರೆಯಲ್ಲಿ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.