More

    ವಿಜೃಂಭಣೆಯ ಶ್ರೀ ವೀರಭದ್ರ ಸ್ವಾಮಿ ಉತ್ಸವ

    ಬೀರೂರು: ಹಳೇ ಪೇಟೆಯಲ್ಲಿ ನೆಲೆಸಿರುವ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ ದಿವ್ಯ ರಥೋತ್ಸವ ಶನಿವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.
    ರಥೋತ್ಸವದ ಅಂಗವಾಗಿ ಪ್ರತಿ ದಿನ ಊರಿನ ರಾಜ ಬೀದಿಗಳಲ್ಲಿ ಆನೆ, ಸಿಂಹ, ಸರ್ಪ, ಅಶ್ವ, ನವಿಲು, ವೃಷಭ ಹಾಗೂ ಮಂಟಪ ಉತ್ಸವ ನೆರವೇರಿಸಲಾಗಿತ್ತು. ಬುಧವಾರ ಬೆಳಗ್ಗೆ ಭಂಡಾರದ ಒಡೆಯ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ಸಾನ್ನಿಧ್ಯದಲ್ಲಿ 101 ಎಡೆ ಸೇವೆ ಸಮರ್ಪಿಸಲಾಯಿತು. ಎಂಟು ದಿನ ಶ್ರೀ ವೀರಭದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಪುಷ್ಪ್ಪಾಗಳಿಂದ ಅಲಂಕರಿಸಿ ಉತ್ಸವ ನಡೆಸಿ ಶುಕ್ರವಾರ ಸಂಜೆ ಶ್ರೀ ವೀರಭದ್ರ ಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ ಕಲ್ಯಾಣೋತ್ಸವ ನೆರವೇರಿಸಲಾಯಿತು.
    ಶುಕ್ರವಾರ ರಾತ್ರಿ ಹಣತೆ ಹಾಗೂ ಹರಕೆ ಹೊತ್ತ ಮಹಿಳೆಯರು, ಸುಮಂಗಲಿಯರು ಹಾಗೂ ಯುವತಿಯರು ಬೆಳಗ್ಗಿನಿಂದ ಉಪವಾಸ ವ್ರತ ಕೈಗೊಂಡು ರಾತ್ರಿ ರಥದ ಸುತ್ತಲು ಹೊತ್ತು ಮೂರು ಬಾರಿ ಪ್ರದಕ್ಷಿಣೆ ಹಾಕಿ ವಿಶೇಷ ಗುಗ್ಗಳ ಸೇವೆ ಸಲ್ಲಿಸಿ ಹರಕೆ ತೀರಿಸಿದರು.
    ಶನಿವಾರ ಸಂಜೆ ಹೂವಿನ ಅಲಂಕಾರ ಹಾಗೂ ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಶ್ರೀ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ರುದ್ರಹೋಮ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ನೂರಾರು ತೆಂಗಿನ ಕಾಯಿಗಳನ್ನು ರಥದ ಚಕ್ರಕ್ಕೆ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts