

ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆಚರಿಸಲ್ಪಡುವ 48ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಶನಿವಾರದಿಂದ ಸೋಮವಾರದವರೆಗೆ ಮೂರು ದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕೆ.ಸುಧಾಕರ ಶೆಟ್ಟಿ ತಿಳಿಸಿದರು.
ಸೆ.7ರಂದು ಬೆಳಗ್ಗೆ ಶ್ರೀ ಗಣಪತಿ ದೇವರ ವಿಗ್ರಹ ಪ್ರತಿಷ್ಠಾಪನೆ, ಗಣಪತಿ ಹೋಮ, ಆಟೋಟ ಸ್ಪರ್ಧೆ, ಭಜನಾ ಸೇವೆ, ಭಕ್ತಿಗೀತಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ.ಎಸ್‌ಪಿ ಗುರುದಾಸ್ ಮಂಗಳೂರು ಅವರಿಂದ ಗಿರಿಜಾ ಕಲ್ಯಾಣ-ಶ್ರೀ ಗಣೇಶ್ ಮಹಿಮೆ ಎಂಬ ಕಥಾ ಕೀರ್ತನೆ ಜರುಗಿ ಮಹಾಪೂಜೆ ನಡೆಯಲಿದೆ.
8ರಂದು ಗಣಹೋಮ ಭಜನಾ ಸೇವೆ, ‘ವಿಶ್ವರಥ ವಿಶ್ವಾಮಿತ್ರ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಮಿತಿ ಅಧ್ಯಕ್ಷ ಕೆ.ಸುಧಾಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕ, ಖ್ಯಾತ ವಕೀಲ ಮಹೇಶ್ ಕಜೆ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್, ಭಾರತೀಯ ಭೂ ಸೇನೆಯ ಸುಧೀರ್ ಶೆಟ್ಟಿ ಭಾಗವಹಿಸಲಿದ್ದಾರೆ. ಉಪ್ಪಿನಂಗಡಿಯ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ. ಬಳಿಕ ಶ್ರೀ ದೇವರಿಗೆ ಮಹಾ ರಂಗಪೂಜೆ, ಅನ್ನ ಸಂತರ್ಪಣೆ.
9ರಂದು ಗಣಪತಿ ಹೋಮ ಭಜನಾ ಸೇವೆ, ಡಿಪಿ ಮ್ಯೂಸಿಕಲ್ ರಾಮನಗರ ಉಪ್ಪಿನಂಗಡಿ ಅವರಿಂದ ರಸಮಂಜರಿ ಕಾರ್ಯಕ್ರಮ. ಮಧ್ಯಾಹ್ನ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ. ಸಾಯಂಕಾಲ ಮಹಾಪೂಜೆ, ಬಳಿಕ ಶ್ರೀ ದೇವರ ಶೋಭಾಯಾತ್ರೆ ಜರುಗಿ ವಿಗ್ರಹದ ವಿಸರ್ಜನೆ ನಡೆಯಲಿದೆ ಎಂದು ತಿಳಿಸಿದರು.