ಪಟ್ಲ ಫೌಂಡೇಷನ್‌ನಿಂದ ಕಲಾವಿದರ ಬಾಳು ಉಜ್ವಲ

Ism_Patla-Foundation
Published on

ಪುತ್ತೂರು ಗ್ರಾಮಾಂತರ : ಪಟ್ಲ ಫೌಂಡೇಷನ್ ತನ್ನ ಕಾರ್ಯಗಳ ಮೂಲಕ ಲೋಕ ಪರಿಚಯ ಮಾಡಿಕೊಂಡಿದೆ. ಸಾವಿರಾರು ಮಂದಿ ಕಲಾಭಿಮಾನಿಗಳ ಜತೆ ಒಗ್ಗೂಡಿಕೊಂಡು ಯಕ್ಷಗಾನ ಕಲಾವಿದರ ಬಾಳು ಉಜ್ವಲಗೊಳಿಸಿದ ಕೆಲಸ ಮಾಡುತ್ತಿದೆ. ಅಲ್ಲದೆ ಯಕ್ಷಗಾನ ಕಲಾಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ರಿಜಿಸ್ಟ್ರಾರ್, ಪಟ್ಲ ಫೌಂಡೇಷನ್ ಪುತ್ತೂರು ಘಟಕದ ಕಾರ್ಯದರ್ಶಿ ಚಂದ್ರಹಾಸ್ ರೈ ಮಾಡಾವು ಹೇಳಿದರು.

ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಯಕ್ಷದ್ರುವ ಪಟ್ಲ ಫೌಂಡೇಷನ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ ಯಕ್ಷಗಾನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನೆಟ್ಟಣಿಗೆ ಮುಡ್ನೂರು ಗ್ರಾಪಂ ಸದಸ್ಯ ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಯಕ್ಷಗಾನ ಗುರು ಜಯರಾಮ್ ಪಾಟಾಳಿ ಪಡುಮಲೆ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷರಾದ ಬಿ.ಎಚ್.ಸೂಫಿ ಅಧ್ಯಕ್ಷತೆ ವಹಿಸಿದ್ದರು.

ನೆಟ್ಟಣಿಗೆ ಮುಡ್ನೂರು ಗ್ರಾಪಂ ಸದಸ್ಯರಾದ ಕುಮಾರ್‌ನಾಥ ಪೂಜಾರಿ, ಪ್ರಫುಲ್ಲಾ ರೈ, ಪ್ರದೀಪ್ ರೈ ಕರ್ನೂರು, ಯಕ್ಷಗಾನ ಅಭಿಮಾನಿಗಳಾದ ಸುಭಾಶ್ಚಂದ್ರ ರೈ ಮೈರೋಳು, ಸುಬೋಧ್ ರೈ ಹಾಗೂ ಕರ್ನೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ಮೂರ್ತಿಮಾರು, ಶಾಲೆ ಶಿಕ್ಷಕರಾದ ವಿಜೇತಾ, ಸಾವಿತ್ರಿ, ಸವಿತಾ, ಅರುಣಾ ಕುಮಾರಿ ಉಪಸ್ಥಿತರಿದ್ದರು.

ಪಟ್ಲ ಫೌಂಡೇಷನ್ ಪುತ್ತೂರು ಘಟಕದ ಸಂಚಾಲಕ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಪ್ರಶಾಂತ್ ರೈ ಮುಂಡಾಲ ಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ರಮೇಶ್ ಶಿರ್ಲಾಲ್ ಸ್ವಾಗತಿಸಿದರು. ಆಶಾಲತಾ ವಂದಿಸಿದರು. ಲತಾ ರಮೇಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net