

ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ. ಕೌನ್ಸೆಲಿಂಗ್ ಅನ್ನು ಸೆ.25ರಂದು ಬೆಳಗ್ಗೆ 9.30ರಿಂದ ಜ್ಞಾನಭಾರತಿ ಆವರಣದಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಸಲಿದೆ ಎಂದು ವಿವಿ ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ.
ಪಿಎಚ್.ಡಿ. ನೋಂದಣಿಗಾಗಿ ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿರುವ ಮಾರ್ಗದರ್ಶಕರ ಬಳಿಯಿರುವ ಸೀಟುಗಳನ್ನು ಅಂದು ಹಂಚಿಕೆ ಮಾಡಲಾಗುತ್ತದೆ. ಸೀಟುಗಳ ವಿವರಗಳನ್ನು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಶೀಘ್ರವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.