ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ ಸಂಚಾಲಕರಾಗಿ, ಅಧ್ಯಾಪಕರಾಗಿ ಮೀಂಜ ಪ್ರದೇಶದ ವಿದ್ಯಾಭ್ಯಾಸ ೇತ್ರದ ಧ್ರುವತಾರೆಯೆನಿಸಿಕೊಂಡಿದ್ದ ದಿ.ಎಂ ರಾಮಕೃಷ್ಣ ರಾವ್ ಅವರ 19ನೇ ಪುಣ್ಯತಿಥಿಯ ಸಂದರ್ಭ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮ ಸೆ.24ರಂದು ಶಾಲಾ ರಂಗಮಂಟಪದಲ್ಲಿ ನಡೆಯಲಿದೆ.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ್ ಅಧ್ಯಕ್ಷತೆ ವಹಿಸುವರು. ಎಸ್.ವಿ.ವಿ.ಎಚ್.ಎಸ್.ಎಸ್ ಕೊಡ್ಲಮೊಗರು ಶಾಲೆ ನಿವೃತ್ತ ಮುಖ್ಯಶಿಕ್ಷಕ ಐ.ಶಂಕರನಾರಾಯಣ ಭಟ್ ಉಪಸ್ಥಿತರಿರುವರು. ಶಾಲಾ ಹಳೇ ವಿದ್ಯಾರ್ಥಿ ಹಾಗೂ ನಿವೃತ್ತ ಯೋಧ ಉದಯಕುಮಾರ್ ಎಂ.ಅವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಶಾಲಾ ಹಳೇ ವಿದ್ಯಾರ್ಥಿನಿ ಆದಿಶ್ರೀ ಎಸ್.ಎನ್.ಅವರಿಗೆ ಅಭಿನಂದನೆ ಕಾರ್ಯಕ್ರಮ ಜರುಗಲಿದೆ ಎಂದು ಶಾಲಾ ಸಂಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.