ಹಳೆಯ ವಿದ್ಯಾರ್ಥಿಗಳ ಕಾರ್ಯ ಮಾದರಿ

26tlr1a
Published on

ತಲ್ಲೂರ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಕಲಿತ ಶಾಲೆಗೆ 10 ಬೋರ್ಡ್​ ದೇಣಿಗೆ ನೀಡಿರುವ ಕಾರ್ಯ ಮಾದರಿಯಾಗಿದೆ ಎಂದು ತಾಪಂ ಮಾಜಿ ಅಧ್ಯ ವಿನಯಕುಮಾರ ದೇಸಾಯಿ ಹೇಳಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1994&2001ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಈಚೆಗೆ ಹಮ್ಮಿಕೊಂಡಿದ್ದ 6 ವೈಟ್​ ಮತ್ತು 4 ಗ್ರೀನ್​ ಬೋರ್ಡ್​ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಬದುಕಿನಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಕಲಿತ ಶಾಲೆ ಹಾಗೂ ಹೆತ್ತವರನ್ನು ಮರೆಯಬಾರದು. ಎಲ್ಲರಿಗೂ ಗೌರವ ತರುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಮುಖ್ಯಶಿಕ ಡಿ.ಡಿ.ಭೋವಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನ ಹಾಗೂ ಸತತ ಪರಿಶ್ರಮದಿಂದ ಮುನ್ನುಗ್ಗಿದರೆ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈರಣ್ಣ ಹುದ್ದಾರ, ಶಂಕರಗೌಡ ಪಾಟೀಲ, ಮಹಾರುದ್ರಪ್ಪ ಉಪ್ಪಿನ, ಬಾಬುಗೌಡ ಅಣ್ಣಿಗೇರಿ, ಬಸವರಾಜ ಕಟ್ಟಿಮನಿ, ಎಸ್​ಡಿಎಂಸಿ ಅಧ್ಯ ಶಾಮ ಚಿಕಾಕಿ, ಉಪಾಧ್ಯ ಸುಜಾತಾ ಬೆನಕಟ್ಟಿ, ಸದಸ್ಯರು, ಶಿಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net