

ಬೆಂಗಳೂರು: ಮಾದರಿ ಪ್ರೌಢ ಶಾಲೆಯ ಹಳೇ ವಿದ್ಯಾರ್ಥಿಗಳ ಬಳಗದ ವತಿಯಿಂದ ಚಾಮರಾಜಪೇಟೆಯ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಶಿಕ್ಷಕರಿಗೆ ಗೌರವ ಸಮರ್ಪಣೆ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಹಳೇ ವಿದ್ಯಾರ್ಥಿಗಳು ಶಿಕ್ಷಕರಾದ ಚಂಪಕಾ, ಕೆ.ಲೀಲಾ, ಕೆ.ಗೀತಾ, ಕೃಷ್ಣಮೂರ್ತಿ ಮತ್ತಿತರರನ್ನು ಗೌರವಿಸಿದರು.
ಹಳೆ ವಿದ್ಯಾರ್ಥಿಗಳಾದ ಸಿ.ಆರ್.ಮನೋಜ್ ಕುಮಾರ್, ಎಚ್.ಆನಂದ್, ಟಿ.ಪಿ.ಮಹೇಶ್ ಚಂದ್ರ, ಟಿ.ಟಿ.ರವಿಶಂಕರ್, ದೇವರಾಜ್, ರಾಮೇಗೌಡ ಮತ್ತಿತರರಿದ್ದರು.