ಹೋರಾಟಗಾರರಿಗೆ ಗದ್ದರ್ ಸ್ಪೂರ್ತಿ

Untitled design(18)
ಮಸ್ಕಿಯಲ್ಲಿ ವಿವಿಧ ಸಂಘಟನೆಗಳು ಕ್ರಾಂತಿ ಕವಿ ಗದ್ದರ್‌ಗೆ ಶ್ರದ್ಧಾಂಜಲಿ ಸಲ್ಲಿಸಿದವು. ಪ್ರಮುಖರಾದ ಸಂತೋಷ ಹಿರೇದಿನ್ನಿ, ಎಂ.ಅನಿಲ್ ಕುಮಾರ್, ಮಾರುತಿ ಜಿನ್ನಾಪುರ, ವಿಜಯ್ ಬಡಿಗೇರ್, ಎಂ. ಅನಿಲ್ ಕುಮಾರ್, ಚಂದ್ರಶೇಖರ ಕ್ಯಾತ್ನಟ್ಟಿ, ಗಂಗಪ್ಪ ತೋರಣದಿನ್ನಿ, ದೇವರಾಜ್ ಮಡಿವಾಳ, ನಾಗರಾಜ್ ಮೆದಕಿನಾಳ್, ವೆಂಕಟೇಶ್ ನಾಯಕ, ತಿರುಪತಿ ಮಸ್ಕಿ ಇನ್ನಿತರರಿದ್ದರು.
Published on

ಮಸ್ಕಿ: ಪಟ್ಟಣದ ಹಳೇ ಬಸ್ ನಿಲ್ದಾಣದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ವಿವಿಧ ಸಂಘಟನೆಗಳು ಕ್ರಾಂತಿಕಾರಿ ಹೋರಾಟಗಾರ ಗದ್ದರ್‌ಗೆ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಿದವು.

ಹೋರಾಟಗಳಿಗೆ ತುಂಬಲಾರದ ನಷ್ಟ

ಕರ್ನಾಟಕ ರೈತ ಸಂಘದ ಮುಖಂಡ ಸಂತೋಷ ಹಿರೇದಿನ್ನಿ ಮಾತನಾಡಿ, ಜನಪರ ಹಾಗೂ ಪ್ರಗತಿಪರ ಹೋರಾಟಗಳಿಗೆ ಗದ್ದರ್ ನಮ್ಮೆಲ್ಲರಿಗೆ ಸ್ಪೂರ್ತಿಯಾಗಿದ್ದಾರೆ. ಅವರು ನಮ್ಮನ್ನು ಬಿಟ್ಟು ಅಗಲಿರುವುದು ಹೋರಾಟಗಳಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ಜನಪರ ಹಾಡುಗಳಿಂದ ಸಂಘಟಿಸುವ ಶಕ್ತಿ

ಪ್ರಗತಿಪರ ಸಂಘಟನೆಯ ಮುಖಂಡ ಎಂ.ಅನಿಲ್ ಕುಮಾರ್ ಮಾತನಾಡಿ, ಗದ್ದರ್ ಜನರ ಬದುಕಿನ ಜೊತೆಗೆ ಒಂದು ಸಾಂಸ್ಕೃತಿಕ ಲೋಕವಾಗಿದ್ದರು. ಕಲೆ ಸಾಹಿತ್ಯ ಜನಪರ ಹಾಡುಗಳನ್ನು ಹಾಡುವ ಮೂಲಕ ಜನರನ್ನು ಸಂಘಟಿಸುತ್ತಿದ್ದರು ಎಂದರು.

ಪ್ರಮುಖರಾದ ಮಾರುತಿ ಜಿನ್ನಾಪುರ, ವಿಜಯ್ ಬಡಿಗೇರ್, ಎಂ. ಅನಿಲ್ ಕುಮಾರ್, ಚಂದ್ರಶೇಖರ ಕ್ಯಾತ್ನಟ್ಟಿ, ಗಂಗಪ್ಪ ತೋರಣದಿನ್ನಿ, ದೇವರಾಜ್ ಮಡಿವಾಳ, ನಾಗರಾಜ್ ಮೆದಕಿನಾಳ್, ವೆಂಕಟೇಶ್ ನಾಯಕ, ತಿರುಪತಿ ಮಸ್ಕಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net