ಅನಾಥವಾದ ಸರ್ಕಾರಿ ಬಾಲಕಿಯರ ಶಾಲೆ

02
Published on

ಕೆಂಭಾವಿ : ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಈ ದಿನಗಳಲ್ಲಿ ಖಾಸಗಿ ಶಾಲೆಗೆ ಮೀರಿಸುವಂಥ ಅನೇಕ ಚಟುವಟಿಕೆಗಳಿಂದ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಈಗ ಶಿಕ್ಷಕರಿಲ್ಲದೆ ಅನಾಥವಾಗಿದೆ.

ಗುಣಮಟ್ಟದ ಶಿಕ್ಷಣ, ಆಟ, ಸಾಂಸ್ಕೃತಿಕ ಚಟುವಟಿಕೆ, ಭವ್ಯ ಕಟ್ಟಡ, ರಾಜ್ಯ ಮಟ್ಟದ ಪ್ರತಿಯೊಂದು ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆ ಹಾಗೂ ರಾಷ್ಟಿçÃಯ ಹಬ್ಬಗಳಲ್ಲಿ ವಿಶೇಷ ಉಡುಪಿನಿಂದ ಭಾಗವಹಿಸುತ್ತಿದ್ದವರನ್ನು ಜು.೮ರಂದು ನಡೆದ ಒಂದು ಕಹಿ ಘಟನೆ ಇಡೀ ಶಿಕ್ಷಕರನ್ನು ವರ್ಗಾವಣೆಗೊಳ್ಳುವಂತೆ ಮಾಡಿದೆ.

ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮುಖ್ಯಗುರು, ಅಡುಗೆ ಸಿಬ್ಬಂದಿ ಮತ್ತು ಬಿಸಿಯೂಟ ಅಧಿಕಾರಿಯನ್ನು ಸರ್ಕಾರ ಅಮಾನತು ಮಾಡಿದೆ. ಆದರೆ ಘಟನೆ ನಡೆದ ಒಂದೇ ತಿಂಗಳಲ್ಲಿ ಎಂಟು ಶಿಕ್ಷಕರಲ್ಲಿ ಅರ್ಧಕ್ಕೂ ಹೆಚ್ಚು ಜನ ಸ್ವಯಂ ವರ್ಗಾವಣೆ ಪಡೆದು ಬೇರೆಡೆ ಹೋಗಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಈಗ ಎಲ್ಲ ಶಿಕ್ಷಕರನ್ನು ಕಳೆದುಕೊಳ್ಳುವ ಸ್ಥಿತಿ ಬಂದೊದಗಿದೆ. ಈಗಿರುವ ಮೂವರು ಶಿಕ್ಷಕರಲ್ಲಿ ಒಬ್ಬರು ಸಂಗೀತಕ್ಕೆ, ಇಬ್ಬರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಹೇಗೆ ಪಾಠ ಮಾಡುತ್ತಾರೆ ಎಂಬ ಪ್ರಶ್ನೆ ಪಾಲಕರದ್ದು.
ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರೂ ವಿಷಯವಾರು ಶಿಕ್ಷಕರ ಕೊರತೆ ಮಾತ್ರ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಇಡೀ ಶಾಲೆ ಶಿಕ್ಷಕರಿಲ್ಲದೆ ನಾವಿಕನಿಲ್ಲದ ದೋಣಿಯಂತಾಗಿದ್ದು, ಸರ್ಕಾರ ಆದಷ್ಟು ಬೇಗ ಕಾಯಂ ಶಿಕ್ಷಕರನ್ನು ನೇಮಿಸಿ ಅಚಾತುರ್ಯದಿಂದಾದ ಕಹಿ ಘಟನೆ ಮರೆತು ಮತ್ತೆ ಈ ಶಾಲೆ ಹೆಸರು ಮಾಡಲಿ ಎಂಬುದು ಪಾಲಕರ ಒತ್ತಾಸೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net