

ಬೀದರ್: ವೃದ್ಧ ಮಹಿಳೆಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ತಾಲೂಕಿನ ಅತಿವಾಳ ಗ್ರಾಮದ ಬಳಿ ನಡೆದಿದೆ. ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕಮಲಾಬಾಯಿ ಶೆಟಕರ್(60) ಕೊಲೆಯಾದ ವೃದ್ಧ ಮಹಿಳೆ. ಅತಿವಾಳ ಗ್ರಾಮದ ಬೀದರ್ - ಭಾಲ್ಕಿ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಮೇಲೆ ವೃದ್ಧೆಯ ಮೃತದೇಹ ಪತ್ತೆಯಾಗಿದೆ. ಆಕೆ ತನ್ನ ಜಮೀನು ಸರ್ವೆ ಮಾಡಿಕೊಳ್ಳಲು ಸ್ಥಳಕ್ಕೆ ಬಂದಿದ್ದಳು. ಆ ವೇಳೆ ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ವೃದ್ಧ ಮಹಿಳೆಯ ಸಂಬಂಧಿಕರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜನವಾಡ ಪೊಲೀಸ್ ಠಾಣೆ ಪಿಎಸ್ಐ ಭೇಟಿ, ಪರಿಶೀಲನೆ ನಡೆಸಿದ್ದಾರೆ. ತನಿಖೆಯ ನಂತರ ಹೆಚ್ಚಿನ ವಿಚಾರ ಹೊರಬೀಳಬೇಕಿದೆ.