

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಉತ್ತರ ಕರ್ನಾಟಕದವರೇ ಸೇರಿಕೊಂಡು ನಿರ್ಮಿಸಿ ನಿರ್ದೇಶಿಸುವುದರ ಜತೆಗೆ ಕಲಬುರಗಿಯವರೇ ಹೆಚ್ಚು ಕಲಾವಿದರಾಗಿ ನಟಿಸಿರುವ ಒಲವೇ ಮಂದಾರ-೨ ಸಿನಿಮಾ ಎಲ್ಲಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ೨೫ನೇ ದಿನದತ್ತ ಮುನ್ನುತ್ತಿದೆ ಎಂದು ನಿರ್ಮಾಪಕ ರಮೇಶ ಮರಗೋಳ, ನಿರ್ದೇಶಕ ಎಸ್.ಆರ್.ಪಾಟೀಲ್, ಚಿತ್ರದ ನಾಯಕ ಸನ್‌ತ್ ಮತ್ತು ನಾಯಕಿ ಪ್ರಜ್ಞಾ ಭಟ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಮೂರನೇ ವಾರದತ್ತ ಮುನ್ನುಗ್ಗಿದೆ. ಈಗ ಸಿಗುತ್ತಿರುವ ಬೆಂಬಲ ನೋಡಿದಾಗ ೫೦ ದಿನ ಓಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿನಿಮಾ ಈ ಭಾಗದ¯್ಲೆÃ ಚಿತ್ರೀಕರಣವಾಗಿದೆ. ನಮ್ಮ ಭಾಗದವರು ವೀಕ್ಷಿಸಿ ಬೆಂಬಲಕ್ಕೆ ನಿಲ್ಲಬೇಕು ಎಂದು ಮರಗೋಳ ಮನವಿ ಮಾಡಿದರು.
ನಿರ್ದೇಶಕ ಎಸ್.ಆರ್.ಪಾಟೀಲ ಮಾತನಾಡಿ, ಒಲವೇ ಮಂದಾರ ಸಿನಿಮಾಗೂ ನಮ್ಮ ಒಲವೇ ಮಂದಾರ-೨ ಸಿನಿಮಾ ಎರಡು ಬೇರೆ, ಒಂದಕ್ಕೊAದು ಸಂಬAಧವಿಲ್ಲ. ಪ್ರೇಮ ಕಥೆಯನ್ನು ಸಾಮಾಜಿಕ ಮೌಲಗಳೊಂದಿಗೆ ಜನರಿಗೆ ತೋರಿಸುವ ಪ್ರಯತ್ನ ಮಾಡಿz್ದÉÃವೆ. ಸಿನಿಮಾ ವೀಕ್ಷಿಸಿ ಬೆಂಬಲಿಸಿ ಎಂದರು.
ನಾಯಕ ಸನತ್ ಮಾತನಾಡಿ, ಸಿನಿಮಾ ತೆರೆ ಕಂಡ ಮಾರನೇ ದಿನ್ಕ ದೃವ ಸರ್ಜಾ ಅವರು ಕರೆದು ಚಿತ್ರ ಚೆನ್ನಾಗಿದೆ ಬಂದಿದೆ ಎಂದು ಪ್ರೋತ್ಸಾಹಿಸಿದರು ಎಂದರು. ಚಿತ್ರದ ನಾಯಕಿ ಪ್ರe್ಞÁ ಭಟï, ಸಹ ನಿರ್ಮಾಪಕ ಸತೀಶ, ಸಂಗೀತ ನಿರ್ದೇಶಕ ಡಾ.ಕಿರಣ ತೋಟಂಬೈಲು, ಸಿನಿಮಾದಲ್ಲಿ ನಟಿಸಿರುವ ಮಯೂರ, ಸತೀಶ, ನಾಮದೇವ ರಾಠೋಡ, ಯ¯್ಲÁಲಿಂಗ ಮೊದಲಾದವರಿದ್ದರು.