ಗಂಗಾವತಿ: ತಾಲೂಕಿನ ಆಗೋಲಿಯಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ಕೃಷಿ ಇಲಾಖೆ ಮತ್ತು ವೆಂಕಟಗಿರಿ ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ಶೇಂಗಾ ಬೆಳೆ ಕೃಷಿ ಕುರಿತು ಕಾರ್ಯಾಗಾರ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಸಹಾಯಕ ಕೃಷಿ ನಿರ್ದೇಶಕಿ ಡಾ.ಸಿ.ಆರ್.ಅಭಿಲಾಷಾ ಮಾತನಾಡಿ, ಶೇ.70 ಖಾದ್ಯ ತೈಲ ಆಮದು ಮಾಡಿಕೊಳ್ಳಲಾಗುತ್ತಿದ್ದು,ದೇಶದಲ್ಲಿನ ತೈಲ ಉತ್ಪಾದನೆ ಹೆಚ್ಚಿಸುವುದಕ್ಕಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ವೆಂಕಟಗಿರಿ ಹೋಬಳಿಯಲ್ಲಿ ಪ್ರಾಯೋಗಿಕವಾಗಿ 210ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆ ಗುರಿ ಹೊಂದಲಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ.ಮಲ್ಲೇಶ, ಸಸ್ಯ ರೋಗ ತಜ್ಞೆ ಡಾ.ರೇವತಿ ಮಾತನಾಡಿದರು. ವೆಂಕಟಗಿರಿ ಹೋಬಳಿ ಕೃಷಿ ಅಧಿಕಾರಿ ಎಸ್.ಜಿ.ಹರೀಶ್, ಸಹಾಯಕರಾದ ಗಂಗಾಧರ, ಗಣೇಶ, ಗಂಗಾಧರ ಹಳೆಕೋಟೆ, ಗ್ರಾಪಂ ಅಧ್ಯಕ್ಷ ಅಮಾಜಪ್ಪ, ಎನ್‌ಆರ್‌ಎಲ್‌ಎಂ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮೀ, ಕೃಷಿ ಸಖಿ ಹಲೀಮಾ ಬೇಗಂ, ಪಶುಸಖಿ ನೇತ್ರಾ, ರೈತರಾದ ರಾಯಪ್ಪ, ರಾಜು, ಹಾಲಪ್ಪ, ಯಮನೂರಪ್ಪ, ಮಂಜುನಾಥ, ಶರಣಪ್ಪ ಇತರರಿದ್ದರು.