ವಾರದ ಬಳಿಕ ಸಿಸಿಟಿವಿಯಲ್ಲಿ ಬಯಲಾಯ್ತು ಬಾಲಕನ ಸಾವಿನ ರಹಸ್ಯ!

boydeath
Published on

ಬಾಗಲಕೋಟೆ: ಚರಂಡಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ ಎಂದುಕೊಂಡಿದ್ದ ಪೋಷಕರಿಗೆ ಆಘಾತಕಾರಿಯಾಗಿದೆ. ತಮ್ಮ ಮಗ ಚರಂಡಿಯಲ್ಲಿ ಆಯಾತಪ್ಪಿ ಬಿದ್ದು, ಮೃತಪಟ್ಟಿರಬಹುದೆಂದೇ ಈವರೆಗೆ ಭಾವಿಸಲಾಗಿತ್ತು. ಆದರೀಗ ಸಿಸಿಟಿವಿ ದೃಶ್ಯಾವಳಿಯಿಂದ ಬಾಲಕನ ಸಾವಿನ ರಹಸ್ಯ ಬಯಲಾಗಿದೆ.

ಬಾಲಕನ‌ ಮೈ ಮೇಲೆ ಗೇಟ್ ಬಿದ್ದ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗುವ ಮೂಲಕ ಬಾಲಕನ ಸಾವಿಗೆ ಕಾರಣ ಏನು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ರಂಜಿತ ಸೂರಗೊಂಡ(8) ಗೇಟ್​​ಗೆ ಬಲಿಯಾದ ಬಾಲಕ.

ಇತ್ತೀಚೆಗೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಬಸವೇಶ್ವರ ಸಮುದಾಯಭವನದ ಮುಂದೆ ಅಳವಡಿಸಲಾಗಿದ್ದ ಗೇಟ್ ಬಾಲಕನ ಮೈಮೇಲೆ ಬಿದ್ದಿದ್ದರಿಂದ ಚರಂಡಿಯಲ್ಲಿ ಬಿದ್ದ ಬಾಲಕ ಮೃತಪಟ್ಟಿದ್ದನು. ಮೇ 31 ರಂದು ಈ ಘಟನೆ ಸಂಭವಿಸಿತ್ತು.

ಈ ಬಳಿಕ ಚರಂಡಿಯಲ್ಲಿ ಬಿದ್ದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ನಂಬಲಾಗಿತ್ತು, ನಂತರ ಬಸವೇಶ್ವರ ಸಮುದಾಯ ಭವನದ ಪಿ.ಕೆ.ಪಿ.ಎಸ್ ಸಂಸ್ಥೆಯ ಸಿಸಿಟಿವಿ ಫುಟೇಜ್ ನೋಡಿದಾಗ ಅಸಲಿ ಕಾರಣ ಗೊತ್ತಾಗಿದೆ. ಅವೈಜ್ಞಾನಿಕವಾಗಿ ಗೇಟ್ ಅಳವಡಿಸದ ಕಾರಣ ಬಾಲಕ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಈ ಗೇಟ್​​ ಬಿದ್ದ ರಭಸಕ್ಕೆ ಬಾಲಕ ಚರಂಡಿಯಲ್ಲಿ ಬಿದ್ದು, ಸಾವನ್ನಪ್ಪಿರುವುದು ಗೊತ್ತಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net