777ಚಾರ್ಲಿ ಗೆ ಶುಭ ಹಾರೈಸಿ, ಇದು ನೋಡಲೇಬೇಕಾದ ಚಿತ್ರ ಎಂದ ಸ್ಯಾಂಡಲ್​​ವುಡ್​ ಪದ್ಮಾವತಿ ರಮ್ಯಾ ..!

Ramyacharlee
Published on

ಬೆಂಗಳೂರು: ಕನ್ನಡದ ವಿಭಿನ್ನ ಚಿತ್ರಗಳಿಗೆ ಆಗ್ಗಾಗ್ಗೆ ಶುಭಕೋರುವ ನಟಿ ರಮ್ಯಾ ಈ ಬಾರಿ ರಕ್ಷಿತ್​ ಶೆಟ್ಟಿ ಅಭಿನಯದ 777ಚಾರ್ಲಿ ಚಿತ್ರಕ್ಕೆ ಶುಭಹಾರೈಸಿದ್ದಾರೆ.

ರಮ್ಯಾ ಅವರಿಗೆ ಶ್ವಾನಗಳೆಂದರೆ ಹುಚ್ಚು ಪ್ರೀತಿ, ಇತ್ತೀಚೆಗೆ ತಮ್ಮ ಶ್ವಾನ ಕೊನೆಯುಸಿರೆಳೆದಾಗ ತಾವೇ ಸ್ಮಶಾನಕ್ಕೆ ತೆರಳಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಇದೀಗ ಅದೇ ಕಥಾ ವಿಷಯವನ್ನು ಹೊಂದಿರುವ ಸಿನಿಮಾ ಆಗಿರೋ 777 ಚಾರ್ಲಿಗೆ ಸಾಥ್ ನೀಡಿದ್ದಾರೆ.

ಇದೊಂದು ಎಮೋಷನಲ್ ಚಿತ್ರ ಪ್ರತಿಯೊಬ್ಬರು ನೋಡಲೇಬೇಕಾದ ಸಿನಿಮಾ. ಇಂತಹದೊಂದು ಅದ್ಭುತ ಕಂಟೆಂಟ್ ಇರುವ ಸಿನಿಮಾವನ್ನು ಕೊಟ್ಟಿರುವ ರಕ್ಷಿತ್​ ಶೆಟ್ಟಿ ಹಾಗೂ ತಂಡಕ್ಕೆ ಶುಭಹಾರೈಸುತ್ತೇನೆ ಎಂದು ರಮ್ಯಾ ಹೇಳಿದ್ದಾರೆ.

ಇದೂ ಕೂಡ ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಜೂನ್ 10ಕ್ಕೆ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ರಿಲೀಸ್ ಆಗಲಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net