ಸಿದ್ದರಾಮಯ್ಯ ಕ್ಲಿನ್ ಚಿಟ್ ತಗೊಂಡು ಮತ್ತೇ ಸಿಎಂ ಆಗಲಿ : ಈಗ ರಾಜೀನಾಮೆ ನೀಡಲು ಈಶ್ವರಪ್ಪ ಆಗ್ರಹ

EX DCM K S Eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಕಲಬುರಗಿ : ಮುಡಾ ಹಗರಣದ ಬೆಳವಣಿಗೆ ರಾಜ್ಯಕ್ಕೆ ಮತ್ತು ಕಾಂಗ್ರೆಸ್‌ಗೆ ಕಪ್ಪು ಚುಕ್ಕೆ. ಮುಖ್ಯಮಂತ್ರಿಯಾಗಿ ವಿಚಾರಣೆಗೆ ಹಾಜರಾಗುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಇದು ಮೊದಲು. ಹೀಗೆ ಆಗಬಾರದಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವಿಚಾರದಲ್ಲಿ ಕಾಂಗ್ರೆಸ್ ಧೋರಣೆ ಸರಿಯಾಗಿಲ್ಲ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬAತೆ ವರ್ತಿಸುತ್ತಿದ್ದಾರೆ.ಅವರು ತಮ್ಮ ಮೇಲೆ ಕೇಸ್ ಬಿz್ದÁಗ ರಾಜೀನಾಮೆ ಕೊಡಲು ತಯಾರಿಲ್ಲ. ಆದರೆ ಈ ಹಿಂದೆ ನನ್ನ ಮೇಲೆ ಆರೋಪ ಬಂದಾಗ ಸಿದ್ದಮಯ್ಯ ಮತ್ತು ಡಿಕೆಶಿ ನನ್ನ ರಾಜೀನಾಮೆಗೆ ಹೋರಾಟ ಮಾಡಿz್ದೆÃ ಮಾಡಿದ್ದು. ಅದೇ ನಿಯಮ ಈಗ ಅವರಿಗೆ ಅನ್ವಯಿಸುದಿಲ್ಲವೇ ಎಂದು ಪ್ರಶ್ನಿಸಿದರು.

ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ತಪ್ಪಿತಸ್ಥರು ಅ¯್ಲÁ ಎಂದು ಆರೋಪ ಮುಕ್ತರಾಗಿ ಹೊರಗಡೆ ಬರಲಿ. ಕ್ಲಿನ್‌ಚಿಟ್ ಆದಮೇಲೆ ಬೇಕಾದರೆ ಮತ್ತೇ ಸಿಎಂ ಆಗಲಿ. ಅದಕ್ಕೆ ನಮ್ಮದೇನು ತಕರಾರು ಇಲ್ಲ. ಈಗ ಮೊದಲು ರಾಜೀನಾಮೆ ನೀಡಲಿ ಎಂದರು.

ಮುಡಾ ಹಗರಣ ಹೊರ ಬಂದಾಗ ನನಗೆ ನೆನಪಾಗಿದ್ದು ಅವರ ಪತ್ನಿ ಪಾರ್ವತಿ,ಅವರು ದೇವಸ್ಥಾನ ಬಿಟ್ಟರೆ ಮನೆಯಿಂದ ಹೊರಗಡೆ ಬಂದಿದ್ದು ಯಾರೂ ನೋಡಿಯೇ ಇಲ್ಲ. ಅವರ ಮೇಲೆ ಆಪಾದನೆ ಬಂದಿದೆ. ಸಿಎಂ ಸಿದ್ಧರಾಮಯ್ಯ ನಾನು ತಪ್ಪಿತಸ್ಥನಲ್ಲ ಅಂತ ನಾಟಕೀಯ ಮಾತು ಆಡಬಾರದು. ಈ ಪ್ರಕರಣದಲ್ಲಿ ಕ್ಲೀನ್ ಚೀಟ್ ತಗೊಂಡು ಮತ್ತೆ ಬರಲಿ, ನಮ್ಮದೇನೂ ಅಭ್ಯಂತರ ಇಲ್ಲ.ಸಿಎಂ ಆರಂಭದಲ್ಲಿ ಸತ್ಯಮೇವ ಜಯತೆ ಅಂದರು. ಈಗ ಯಾವುದೆ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಅಂತ ಭಂಡತನಕ್ಕೆ ಇಳಿದಿz್ದÁರೆ ಎಂದು ವ್ಯಂಗ್ಯವಾಡಿದರು.

ಸಿಎo ಕುರ್ಚಿ ಮೇಲೆ ಖರ್ಗೆ ಡಿಕೆಶಿ ಕಣ್ಣು

ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯ ರಾಜೀನಾಮೆಗೆ ಪಡೆಯಲು ಯಾಕೆ ಮುಂದಾಗುತ್ತಿಲ್ಲ. ಯಾಕೆಂದರೆ ಎಲ್ಲಿ ಎಟಿಎಂ ಕೈ ಬಿಟ್ಟು ಹೋಗುತ್ತೋ ಎನ್ನುವ ಭಯ ಅವರನ್ನು ಕಾಡುತ್ತಿದೆ ಎಂದು ಛೇಡಿಸಿದರು. ಸಿದ್ದರಾಮಯ್ಯ ಕೆಳಗಿಳಿದರೆ ಸರ್ಕಾರ ಉರುಳೋದು ಖಚಿತ. ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿz್ದÁರೆ. ಸಿದ್ದರಾಮಯ್ಯರನ್ನು ಕೆಳಗಿಸಿದರೆ ಎಲ್ಲಿ ಸರ್ಕಾರ ಪತನವಾಗುತ್ತೋ ಎನ್ನುವ ಭಯದಿಂದ ಹೈಕಮಾಂಡï ಸೈಲೆಂಟಾಗಿದೆ ಎಂದರು.

ಈಗ ತನಿಖೆ ಮುಗಿದು ಸಿಎಂ ತಪ್ಪಿತಸ್ಥ ಅಂತ ಸಾಬೀತಾದರೆ ರಾಜೀನಾಮೆ ಕೊಡುವೆ ಅಂತಾರೆ. ಹಾಗಾದರೆ , ನನ್ನ ಪ್ರಕರಣದಲ್ಲಿ ತನಿಖೆಗೂ ಮುಂಚೆಯೇ ರಾಜೀನಾಮೆಗೆ ಆಗ್ರಹಿಸಿz್ದÁರೆ. ನನ್ನ ರಾಜೀನಾಮೆಗೆ ಆಗ್ರಹಿಸುವಾಗ ಸಿದ್ರಾಮಯ್ಯ ಅವರೇ ಬಾಯಲ್ಲಿ ಏನು ಇಟ್ಟುಕೊಂಡಿದ್ರಿ ಎಂದು ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದರು.

=====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net