

ಕೊಳ್ಳೇಗಾಲ: ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಒತ್ತಾಯಿಸಿ ಚಾಮರಾಜನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಪಾದಯಾತ್ರೆಗೆ ಕೊಳ್ಳೇಗಾಲ ಡಾ.ಬಾಬು ಜಗಜೀವನರಾಮ್ ಸಂಘಗಳ ಒಕ್ಕೂಟದ ನೂರಾರು ಪದಾಧಿಕಾರಿಗಳು ತೆರಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಹೋರಾಟಗಾರರು ಬಳಿಕ ಘೋಷಣೆ ಕೂಗಿ, ಕಾರು ಹಾಗೂ ಬಸ್ ಮೂಲಕ ಚಾಮರಾಜನಗರಕ್ಕೆ ತೆರಳಿದರು.
ಬಾಬು ಜಗಜೀವನರಾಮ್ ಒಕ್ಕೂಟದ ತಾಲೂಕು ಅಧ್ಯಕ್ಷ ಬಾಲರಾಜು, ಒಳ ಮೀಸಲಾತಿ ಉಪಾಧ್ಯಕ್ಷ ಚಾಮರಾಜಣ್ಣ, ನಗರಸಭೆ ಸದಸ್ಯೆ ಭಾಗ್ಯ, ಸೋಮು, ಮುಳ್ಳೂರು ಮಂಜುನಾಥ್, ನಾರಾಯಣ್, ಸುರೇಶ್, ದರ್ಶನ್, ಯಜಮಾನ ಪುಟ್ಟನಂಜ, ಮುಳ್ಳೂರು ಉಮೇಶ್, ಎಲ್ಲ ಗ್ರಾಮದ ಆದಿ ಜಾಂಬವ ಸಮುದಾಯದ ಯಜಮಾನರು, ಮುಖಂಡರು ಹಾಗೂ ಯುವಕರು ಇದ್ದರು.