ಸದಸ್ಯರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು

cpt sabhe
Published on

ಚನ್ನಪಟ್ಟಣ: ನಗರಸಭೆಯ ಕಂದಾಯ, ಆರೋಗ್ಯ, ತಾಂತ್ರಿಕ, ವಿದ್ಯುತ್​ ಹಾಗೂ ಆಡಳಿತ ವಿಭಾಗದ ಅಧಿಕಾರಿಗಳು ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭಾ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಗರಸಭೆ ಅಧ್ಯ ವಾಸಿಲ್​ ಅಲಿಖಾನ್​ ಅಧ್ಯತೆಯಲ್ಲಿ ಸಾಮಾನ್ಯ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಎಲ್​ಇಡಿ ಬೀದಿ ದೀಪ ಅಳವಡಿಕೆ ಹಾಗೂ ನಿರ್ವಹಣೆ ಬಗ್ಗೆ ಸದಸ್ಯರಿಗೆ ಮಾಹಿತಿ ಇಲ್ಲ. ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ ವೆಚ್ಚದ ಬಾಬ್ತು ಪಾವತಿಯಲ್ಲಿ ಎರಡು ಬಾರಿ ನೋಂದಣೀಯಾಗಿರುವ ವಿಚಾರ ಸೇರಿ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ ವೆಚ್ಚ ಎಸ್​ಎ್​ಸಿ, ಎಸ್​ಸಿಎಸ್​ಪಿ&2024ನೇ ಸಾಲಿನಿಂದ ಪಾವತಿ ಮಾಡಲಾಗಿದೆ ಎನ್ನುವುದನ್ನು ಕಾಮಗಾರಿಗಳ ವೆಚ್ಚ ವಿವರದಲ್ಲಿ ಎರಡು ಕಡೆ ಮುದ್ರಿತವಾಗಿರುವುದನ್ನು ಕಂಡ ಸದಸ್ಯ ನಾಗೇಶ್​ ಹಾಗೂ ಲೋಕೇಶ್​, ನಗರಸಭೆಯ ಎಸ್ಸಿ, ಎಸ್ಟಿ ಹಣ ದುರುಪಯೋಗವಾಗುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುದ್ರಣ ದೋಷದಿಂದ ಎರಡು ಕಡೆ ಮುದ್ರಿತವಾಗಿದೆ. ಹಣ ವ್ಯತ್ಯಯವಾಗಿಲ್ಲ. ಒಂದು ಕಡೆ ಪಾವತಿ ಆಗಿದೆ ಎಂದು ಪೌರಾಯುಕ್ತ ಮಹೇಂದ್ರ ಬಿ. ಅಧಿಕಾರಿಗಳ ಮನವೊಲಿಸಿದರು.

ಇದಕ್ಕೆ ಅಕೌಂಟ್​ ಪುಸ್ತಕ, ಚೆಕ್​ ಪುಸ್ತಕ ದಾಖಲೆ ಕೊಡಿ ಎಂದು ಕೇಳಿದಾಗ ಅಧಿಕಾರಿಗಳು ಮಾಹಿತಿ ಕೊಡಲು ಹಿಂದೇಟುಹಾಕಿದರು. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಅಧ್ಯರು ಮುಂದಿನ ಸಭೆಯಲ್ಲಿ ಪೂರ್ಣ ಮಾಹಿತಿ ಕೊಡಲಾಗುವುದು ಎಂದು ಚರ್ಚೆಗೆ ವಿರಾಮ ಹಾಕಿದರು.

ಸಭೆಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿನ ತಿಟ್ಟಮಾರನಹಳ್ಳಿ ರಸ್ತೆಯಲ್ಲಿರುವ ಹಿಂದು ರುದ್ರಭೂಮಿಯಲ್ಲಿ ನಿರ್ಮಾಣ ಮಾಡಿರುವ ವಿದ್ಯುತ್​ ಚಿತಾಗಾರ ನಿರ್ವಹಣೆ ಮಾಡುವ ವಿಚಾರವನ್ನು ಪೌರಾಯುಕ್ತರು ಪ್ರಸ್ತಾಪ ಮಾಡಿ, ವಿದ್ಯುತ್​ ಚಿತಾಗಾರವನ್ನು ನಿರ್ವಹಣೆ ಮಾಡಲು ಕನಕಪುರ ಮತ್ತು ಮಾಗಡಿಯಲ್ಲಿ ವಿದ್ಯುತ್​ ಚಿತಾಗಾರ ನಿರ್ವಹಣೆ ಮಾಡುತ್ತಿರುವವರು ಮುಂದೆ ಬಂದಿದ್ದು, 1.65 ಲ ರೂ.ಗೆ ಟೆಂಡರ್​ ಹಾಕಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುವಂತೆ ಸಭೆಯ ಗಮನಕ್ಕೆ ತಂದರು. ವಿದ್ಯುತ್​ ಚಿತಾಗಾರ ನಿರ್ಮಾಣವಾಗಿ 3ರಿಂದ 4 ವರ್ಷಗಳಾಗಿದೆ. ಈಗಾಗಲೇ ಕಳ್ಳತನವಾಗಿದ್ದು, ಭದ್ರತೆ ಇಲ್ಲದಂತಾಗಿದೆ. ಚಿತಾಗಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿ ಶ್ರೀ ಚಾಲನೆ ನೀಡುವಂತೆ ಸದಸ್ಯರು ಒತ್ತಾಯಿಸಿದರು.

ಎಲ್​ಇಡಿ ವಿದ್ಯುತ್​ ಅಳವಡಿಸುತ್ತಿರುವ ವಿಚಾರ ಸಭೆಯಲ್ಲಿ ತೀವ್ರ ಚರ್ಚೆಯುಂಟು ಮಾಡಿತು. ಇದರೊಂದಿಗೆ ನಗರಪ್ರದೇಶದಲ್ಲಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದರು, ನಗರಸಭೆಯ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ. ಪ್ರತಿ ವಾರ್ಡ್​ನಲ್ಲಿ 200 ಮೀ. ಪೈಪ್​ ಲೈನ್​ ಕಾಮಗಾರಿ ನಿರ್ಮಾಣ ಮಾಡುವಂತೆ ತಿಳಿಸಿದ್ದು, ಸದಸ್ಯರಾದ ನಮಗೆ ಮಾಹಿತಿ ಇಲ್ಲ ಎಂದು ಸದಸ್ಯರು ಇಂಜಿನಿಯರ್​ ಜಯಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net