

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರಕ್ಕೆ ಸಿದ್ಧತೆ ನಡೆಯುತ್ತಿದ್ದು, ಪೂರ್ವಭಾವಿಯಾಗಿ ದಾರು ಮುಹೂರ್ತ ಹಾಗೂ ಶಿಲ್ಪಿಗಳಿಗೆ ವೀಳ್ಯ ಪ್ರಧಾನ ಸಮಾರಂಭ ತಂತ್ರಿಗಳಾದ ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವ, ಅರ್ಚಕರಾದ ಪದ್ಮನಾಭ ಭಟ್ ಹಾಗೂ ವೈ.ಗುರುರಾಜ ಭಟ್ ಉಪಸ್ಥಿತಿಯಲ್ಲಿ ಸೋಮವಾರ ನಡೆಯಿತು.
ಶ್ರೀ ದೇವಸ್ಥಾನದ ಧ್ವಜಸ್ತಂಭದ ಎದುರು ಆದ್ಯ ಗಣಪತಿ ಪ್ರಾರ್ಥನೆ ಮೂಲಕ ದಾರು ದೇವತೆಗಳಿಗೆ ಪೂಜೆ ನೆರವೇರಿತು. ಬಳಿಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಜೀರ್ಣೋದ್ಧಾರ ಕಾರ್ಯಗಳ ಗುತ್ತಿಗೆದಾರ ಸುಜಯ ಕುಮಾರ್ ಶೆಟ್ಟಿ ಕಾರ್ಕಳ, ವಾಸ್ತು ಶಿಲ್ಪಿ ಕುಡುಪು ಕೃಷ್ಣರಾಜ ತಂತ್ರಿ, ಶಿಲ್ಪಿಗಳಿಗೆ ವೀಳ್ಯ ಪ್ರದಾನಿಸಲಾಯಿತು.
ಇದಕ್ಕೂ ಮೊದಲು ರಾಷ್ಟ್ರೀಯ ಹೆದ್ದಾರಿ 66ರ ಗುಂಡ್ಲಾಡಿ ಕಟ್ಟೆಯಿಂದ ಹತ್ತು ಲಾರಿಗಳಲ್ಲಿ ಆಗಮಿಸಿದ್ದ ಶಿಲೆಗಳು ಹಾಗೂ ದಾರುಖಂಡಗಳನ್ನು ಶೋಭಾಯಾತ್ರೆ ಮೂಲಕ ದೇವಳದತ್ತ ತರಲಾಯಿತು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಪ್ರಮುಖರಾದ ಶ್ರೀನಾಥ್ ಹೆಗ್ಡೆ, ರತ್ನಾಕರ ರಾಜ್ ಅರಸ್, ಭವಾನಿಶಂಕರ ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ, ವಿಷ್ಣುಮೂರ್ತಿ ಆಚಾರ್ಯ, ಸುಹಾಸ್ ಹೆಗ್ಡೆ, ಗೀತಾಂಜಲಿ ಸುವರ್ಣ, ಉದಯ ಶೆಟ್ಟಿ ಎರ್ಮಾಳು, ಪಿ. ರವೀಂದ್ರನಾಥ್ ಜಿ. ಹೆಗ್ಡೆ, ಶೇಖರ ಶೆಟ್ಟಿ, ಅನಿಲ್ ಕುಮಾರ್ ಶೆಟ್ಟಿ, ಕೃಷ್ಣ ಶೆಟ್ಟಿ ಗುತ್ತಿನಾರ್, ಅಶೋಕ್ ಶೆಟ್ಟಿ, ಪುಣೆ ಸಂತೋಷ್ ಶೆಟ್ಟಿ, ಸುರೇಶ್ ಶೆಟ್ಟಿ ಗುಂಡ್ಲಾಡಿ, ನವೀನ್‌ಚಂದ್ರ ಜೆ. ಶೆಟ್ಟಿ, ನವೀನ್ ಎನ್.ಶೆಟ್ಟಿ, ಶಶಿಕಲಾ ಪೂಜಾರಿ, ನೀತಾ ಗುರುರಾಜ್, ಕಸ್ತೂರಿ ರಾಮಚಂದ್ರ, ಮಾಧವ ಶೆಟ್ಟಿ, ವೈ.ಸುಧೀರ್ ಕುಮಾರ್, ವೈ. ಸುಕುಮಾರ್, ಮಿಥುನ್ ಆರ್.ಹೆಗ್ಡೆ, ಚಂದ್ರಹಾಸ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ರಘುಪತಿ ಆಚಾರ್ಯ, ವೈ.ಎನ್. ರಾಮಚಂದ್ರ ರಾವ್, ನಟರಾಜ ಪಿ.ಎಸ್, ಜಗದೀಶ ರಾವ್, ಮುರಳೀನಾಥ ಶೆಟ್ಟಿ, ರಮಾಕಾಂತ ರಾವ್, ಶ್ರೀಧರ ಆಚಾರ್ಯ, ಸದಾಶಿವ ಆಚಾರ್ಯ, ಅಕಾಲಿ ಸುರೇಶ್ ರಾವ್, ಕುಟ್ಟಿ ಪೂಜಾರಿ, ಪ್ರಕಾಶ್ ದೇವಾಡಿಗ, ಅಶೋಕ್ ಸಾಲ್ಯಾನ್, ಸುರೇಶ್, ಕೃಷ್ಣ ಬಂಗೇರ, ರಾಜೇಶ್ ಪಿ, ಪ್ರಶಾಂತ್ ಶೆಣೈ, ಸುಧಾಕರ ಪೂಜಾರಿ ಪಡುಹಿತ್ಲು, ಧನ್‌ಪಾಲ್ ಶೆಟ್ಟಿ, ಸಂಪತ್‌ಕುಮಾರ್ ಆಚಾರ್ಯ, ವಿಶುಕುಮಾರ್ ಆಚಾರ್ಯ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ರವಿ ಶೆಟ್ಟಿ ಗುಂಡ್ಲಾಡಿ, ಪಿ.ಕೆ ಸದಾನಂದ, ಭರತ್ ದೇವಾಡಿಗ ಭಾಗವಹಿಸಿದ್ದರು.