

ಹೆಬ್ರಿ: ಶ್ರೀ ಅನಂತಪದ್ಮನಾಭ ಫ್ರೆಂಡ್ಸ್ ಹೆಬ್ರಿ ಆಶ್ರಯದಲ್ಲಿ 15ನೇ ವರ್ಷದ ಹೆಬ್ಬೇರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಭಾನುವಾರ ಬಿಡುಗಡೆಗೊಳಿಸಿದರು.
ಭಾಸ್ಕರ ಜೋಯಿಸ್ ಮಾತನಾಡಿ ಹೆಬ್ಬೇರಿ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿಕೊಂಡು ಬರುತ್ತಿರುವುದರಿಂದ, ಹೆಬ್ರಿಗೆ ಕಳೆ ತಂದಿದೆ. 15ನೇ ವರ್ಷಕ್ಕೆ ಕಾಲಿಟ್ಟ ಉತ್ಸವವು ದೇವರ ದಯೆಯಿಂದ ಉತ್ತಮವಾಗಿ, ಯಶಸ್ವಿಯಾಗಿ ನಡೆಯಲಿ ಎಂದರು.
ಫೆಬ್ರವರಿ 11ರಿಂದ 14ರವರೆಗೆ ಉತ್ಸವ ನಡೆಯಲಿದೆ. ಪುರ ಮೆರವಣಿಗೆ, ಭಜನೋತ್ಸವ, ಸಾಂಸ್ಕೃತಿಕ ವೈಭವ, ತುಳು, ಕನ್ನಡ ನಾಟಕ, ಉಚಿತ ನೇತ್ರ ತಪಾಸಣೆ ಮತ್ತು ಪೊರೆ ಶಸ್ತ್ರಚಿಕಿತ್ಸೆ ಶಿಬಿರ, ಯಕ್ಷಗಾನ, ಗಾನ, ನೃತ್ಯ ವೈಭವ, ಮಕ್ಕಳ ಆಟಿಕೆ ಸ್ಪರ್ಧೆ, ನೃತ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಘಟಕ ಶೇಖರ್ ತಿಳಿಸಿದರು.
ಫ್ರೆಂಡ್ಸ್ ಹೆಬ್ರಿ ಅಧ್ಯಕ್ಷ ಕರುಣಾಕರ ಸೇರಿಗಾರ್ ಅಧ್ಯಕ್ಷತೆ ವಹಿಸಿದ್ದರು. ಪಿ.ಎಸ್.ಐ ಮಹೇಶ್ ಟಿ.ಎಂ, ತುಳಸಿ ಗ್ರೂಪ್ಸ್ ಅಧ್ಯಕ್ಷ ಬೆಳಂಜೆ ಹರೀಶ್ ಪೂಜಾರಿ, ಪ್ರಮುಖರಾದ ನಾರಾಯಣ ನಾಯ್ಕ, ಹೆಬ್ರಿ ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ ಹೆಗ್ಡೆ, ಉದ್ಯಮಿ ನಾರಾಯಣ.ಕೆ ಉಪಸ್ಥಿತರಿದ್ದರು. ಟಿ.ಜಿ.ಆಚಾರ್ಯ ಸ್ವಾಗತಿಸಿದರು. ಉದಯ ದೇವಾಡಿಗ ವಂದಿಸಿದರು.