

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ನಿಸ್ವಾರ್ಥ ಸೇವೆ, ರಾಷ್ಟ್ರಸೇವೆ ಮಕ್ಕಳಿಂದ ಆರಂಭವಾಗಬೇಕು. ಅಹಂಕಾರ ತ್ಯಜಿಸುವುದೇ ಮಹಾತ್ಯಾಗ. ಅಹಂಕಾರ ಮರೆತಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗಲಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಒಡಿಯೂರು ಶ್ರೀ ಚಾರಿಟೆಬಲ್ ಟ್ರಸ್ಟ್, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಗೋಳಿತ್ತೊಟ್ಟು, ನೆಲ್ಯಾಡಿ, ಪಟ್ಟೂರು ಘಟಕ ಸಮಿತಿ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯದತ್ತ ವ್ರತಪೂಜೆ ಬುಧವಾರ ಗೋಳಿತೊಟ್ಟು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ಸಹಕಾರ ರತ್ನ ಸುರೇಶ್ ರೈ, ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ , ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿ, ಗೋಳಿತ್ತೊಟ್ಟು ಗ್ರಾಪಂ ಅಧ್ಯಕ್ಷೆ ಸವಿತಾ ಪುಲಾರ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಪಟ್ಟೂರು ಘಟಕ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ, ಗೋಳಿತ್ತೊಟ್ಟು ಘಟಕ ಸಮಿತಿ ಅಧ್ಯಕ್ಷ ರವಿಚಂದ್ರ, ನೆಲ್ಯಾಡಿ ಘಟಕ ಸಮಿತಿ ಅಧ್ಯಕ್ಷ ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು. ನೆಲ್ಯಾಡಿ ಘಟಕ ಸಮಿತಿ ಅಧ್ಯಕ್ಷ ಗಂಗಾಧರ ಶೆಟ್ಟಿ ಸ್ವಾಗತಿಸಿದರು. ಪಟ್ಟೂರು ಘಟಕ ಸಮಿತಿ ಸದಸ್ಯ ಅಣ್ಣು ಬಾಳೆಹಿತ್ಲು ವಂದಿಸಿದರು. ಉಪ್ಪಿನಂಗಡಿ ವಲಯಾಧ್ಯಕ್ಷ ದಿನೇಶ್ ಗಾಣಂತಿ, ಸಂಯೋಜಕಿ ಜಯಂತಿ ಜಿ. ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ಪ್ರಾರ್ಥಿಸಿದರು. ಗೋಳಿತ್ತೊಟ್ಟು ವಲಯ ಸಂಯೋಜಕಿ ಭಾರತಿ ಡಿ.ಕೆ., ಉಪ್ಪಿನಂಗಡಿ ವಲಯ ಸಂಯೋಜಕಿ ಸುಮಿತ್ರಾ, ಪುತ್ತೂರು ವಲಯ ಮೇಲ್ವಿಚಾರಕಿ ಸವಿತಾ ರೈ ಕಾರ್ಯಕ್ರಮ ನಿರ್ವಹಿಸಿದರು.
ಗೌರವಾರ್ಪಣೆ
ನಾಟಿ ವೈದ್ಯೆಯರಾದ ಡೀಕಮ್ಮ ಅಲೆಕ್ಕಿ ಗೋಳಿತ್ತೊಟ್ಟು, ಧರ್ಣಮ್ಮ ಪೊಸೋಳಿಗೆ ನೆಲ್ಯಾಡಿ, ಕೊಕ್ಕಡ ಶ್ರೀ ದೇವಿ ಎಲೆಕ್ಟ್ರಿಕಲ್ಸ್ ಹಾರ್ಡ್‌ವೇರ್‌ನ ವಸಂತ ರಾವ್, ನಿವೃತ್ತ ಸೈನಿಕ ಕರುಣಾಕರ ಶೆಟ್ಟಿ ಅಂಬುಡೇಲು ಅವರನ್ನು ಗೌರವಿಸಲಾಯಿತು.