ಅ.8ಕ್ಕೆ ಜಿಲ್ಲೆ ಪ್ರವೇಶಿಸಲಿರುವ ಭಾರತ ಐಕ್ಯತಾ ಯಾತ್ರಾ

Rahul_Gandhi
Published on

ತುಮಕೂರು

ರಾಹುಲ್ ಗಾಂಧಿ ಸಾರಥ್ಯದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ಸೆ.30ಕ್ಕೆ ರಾಜ್ಯ ಪ್ರವೇಶಿಸಲಿದ್ದು ಅ.8 ರಿಂದ 11ರವರೆಗೆ 4 ದಿನಗಳು ತುಮಕೂರು ಜಿಲ್ಲೆಯಲ್ಲಿ ಯಾತ್ರೆ ಮುಂದುವರೆಯಲಿದೆ.

ಅ.8 ರಂದು ಬೆಳಗ್ಗೆ ಆದಿಚುಂಚನಗಿರಿ ಮಹಾಸಂಸ್ಥಾನದ ಮಠದಿಂದ ಆರಂಭವಾಗುವ ಪಾದಯಾತ್ರೆ 11ರ ಹೊತ್ತಿಗೆ ತುರುವೇಕೆರೆ ತಾಲೂಕು ಪ್ರವೇಶಿಸಲಿದೆ. ಕಲ್ಲೂರು ಕ್ರಾಸ್‌ನಲ್ಲಿ ಅಂದು ರಾತ್ರಿ ವಾಸ್ತವ್ಯ.

9 ರಂದು ಬೆಳಗ್ಗೆ ಐಕ್ಯತಾ ಯಾತ್ರೆ ಮತ್ತೆ ಆರಂಭವಾಗಲಿದೆ. ಗುಬ್ಬಿ ತಾಲೂಕಿನ ನಿಟ್ಟೂರು ಮೂಲಕ ಹಾದು ಸೋಮ್ಲಾಪುರದ ಸೋಮೇಶ್ವರ ದೇವಸ್ಥಾನದಲ್ಲಿ ವಿಶ್ರಾಂತಿ. ಚೇಳೂರಿನ ಕೊಡಿಯಾಲದಲ್ಲಿ ರಾತ್ರಿ ವಾಸ್ತವ್ಯ. 10 ರಂದು ಬೆಳಗ್ಗೆ ಯಾತ್ರೆ ಮುಂದುವರೆಯಲಿದ್ದು ಅಂಕಸಂದ್ರ ಮೂಲಕ ಕಳ್ಳಂಬೆಳ್ಳ ತಲುಪಲಿ ಅಲ್ಲೇ ತಂಗಲಾಗುವುದು. 11 ರಂದು ಬೆಳಗ್ಗೆ ಐಕ್ಯತಾ ಯಾತ್ರೆ ಹೆದ್ದಾರಿಯಲ್ಲಿ ಸಾಗಲಿದೆ. ತಾವರೆಕೆರೆಯಲ್ಲಿ ಸಂಜೆ ವಿಶ್ರಾಂತಿ, ಆನಂತರ ಜಿಲ್ಲೆಯ ಗಡಿದಾಟಿ ಹಿರಿಯೂರು ತಾಲೂಕಿನ ಗಡಿಯಲ್ಲಿ ರಾತ್ರಿ ವಾಸ್ತವ್ಯ ಹೂಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net