

ಚನ್ನಪಟ್ಟಣ: ತಾಲೂಕಿನ ನೀರಾವರಿ ಯೋಜನೆಗಾಗಿ ಅಳವಡಿಸಿರುವ ಪ್ರತಿಯೊಂದು ವಸ್ತುಗಳು ಅಮೂಲ್ಯವಾದ ಆಸ್ತಿಗಳು. ಇವುಗಳನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ತಿಳಿಸಿದರು.
ತಾಲೂಕಿನ ಇಗ್ಗಲೂರು ಜಲಾಶಯದ ಬಳಿಯ ಗರಕಹಳ್ಳಿ ಪಂಪ್ ಹೌಸ್ನಲ್ಲಿ ನಡೆಯುತ್ತಿರುವ ಯಂತ್ರಗಳ ಉನ್ನತ್ತೀಕರಣ ಕಾಮಗಾರಿ ವೀಸಿದ ನಂತರ ಅಧಿಕಾರಿಗಳು ಹಾಗೂ ರೈತರ ಜತೆ ಗುರುವಾರ ಸಭೆ ನಡೆಸಿ ಮಾತನಾಡಿದ ಅವರು, ಗರಕಹಳ್ಳಿ ಏತನೀರಾವರಿ ಯೋಜನೆ ಆರಂಭಗೊಂಡು ಹಲವು ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಪಂಪ್ಹೌಸ್ ಯಂತ್ರಗಳ ಬದಲಾವಣೆ ಕಾಮಗಾರಿ ನಡೆಯುತ್ತಿರುವುದು ಒಳ್ಳೆಯದು. ನೀರಾವರಿ ಯೋಜನೆಗೆ ಇರುವ ಯಂತ್ರೋಪಕರಣಗಳು ಸೇರಿ ನೀರಾವರಿ ಯೋಜನೆಗೆ ಸಂಬಂಧಿಸಿದ ಎಲ್ಲವನ್ನೂ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.
ಕಳೆದ ಬೇಸಿಗೆಯಲ್ಲೂ ಯಂತ್ರಗಳು ಕಾರ್ಯನಿರ್ವಹಿಸಿರುವ ಹಿನ್ನೆಲೆಯಲ್ಲಿ ಯಂತ್ರಗಳ ರಿಪೇರಿ ಹಾಗೂ ಉನ್ನತ್ತೀಕರಣ ಕಾಮಗಾರಿ ತಡವಾಗಿರುವುದು ವಾಸ್ತವ. ಆದರೆ, ಈ ಕಾಮಗಾರಿಯನ್ನು ಶ್ರೀವಾಗಿ ಮುಗಿಸಿ, ಮೋಟಾರ್ಗಳಿಗೆ ಚಾಲನೆ ನೀಡಲು ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.