ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಅಡ್ಡಿ, ಜಿಲ್ಲಾಡಳಿತ ಭವನಕ್ಕೇ ಶವ ತಂದ ಸಂಬಂಧಿಕರು..

death
ಸಾಂದರ್ಭಿಕ ಚಿತ್ರ
Published on

ಚಿಕ್ಕಬಳ್ಳಾಪುರ: ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲು ಅಡ್ಡಿಪಡಿಸಿದ್ದಕ್ಕೆ ಜಿಲ್ಲಾಡಳಿತ ಭವನಕ್ಕೇ ಶವವನ್ನು ತೆಗೆದುಕೊಂಡ ಬಂದ ಪ್ರಕರಣವೊಂದು ವರದಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಚಿಂತಾಮಣಿ ತಾಲೂಕು ರಂಗೇನಹಳ್ಳಿ ಗ್ರಾಮದ ವೆಂಕಟಮ್ಮ (80) ಎಂಬವರು ವಯೋಸಹಜ ಸಮಸ್ಯೆಯಿಂದ ಮೃತಪಟ್ಟಿದ್ದರು. ಇವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ಸ್ಮಶಾನದಲ್ಲಿ ನಡೆಸಲು ಮುಂದಾಗಿದ್ದರು.

ಆದರೆ ಗ್ರಾಮದ ನಿವಾಸಿ, ನಿವೃತ್ತ ಸಮಾಜ‌ಕಲ್ಯಾಣ ಇಲಾಖಾಧಿಕಾರಿ‌ ನಾರಾಯಣಸ್ವಾಮಿ ಎಂಬವರು ಅದಕ್ಕೆ ಅಡ್ಡಿಪಡಿಸಿದ್ದರು. ಮಾತ್ರವಲ್ಲ, ಸ್ಮಶಾನ ತನ್ನ ಸ್ವಂತ ಜಮೀನು ಎಂದು ತಗಾದೆ ತೆಗೆದ ಅವರು ಅಲ್ಲಿ ಅಂತ್ಯಸಂಸ್ಕಾರ ನಡೆಸದಂತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದರಿಂದ ರೋಸಿಹೋದ ಕುಟುಂಬಸ್ಥರು ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನಕ್ಕೆ ತೆಗೆದುಕೊಂಡು ಬಂದಿದ್ದಾರೆ. ಜಿಲ್ಲಾಡಳಿತ ಭವನದ ಎದುರು ಶವವಿಟ್ಟು ಆಕ್ರೋಶ ವ್ಯಕ್ತಪಡಿಸಲಾಗುತ್ತಿದ್ದು, ಸಂಬಂಧಿಕರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net