ವಿಕಸನಕ್ಕೆ ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ

Published on

ಬೈಲಹೊಂಗಲ: ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ಸರ್ವಾಂಗೀಣ ಶಿಕ್ಷಣದ ಅಭಿವೃದ್ಧಿಗೆ ಸಹಕಾರಿ ಎಸ್ಡಿಎಂಸಿ ಸದಸ್ಯ ನಾಗೇಶ ಫಕೀರನ್ನವರ ಹೇಳಿದರು.

ಸಮೀಪದ ಆನಿಗೋಳ ಗ್ರಾಮದ ಸರ್ಕಾರಿ ಮಾದರಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಕ್ಕರೆ ಕಾರ್ಖಾನೆ, ಹಿಟ್ಡಿನ ಗಿರಣಿ, ಪರಿಸರ ಜಾಗತಿ ಹಲವಾರು ಬಗೆಯ ವಸ್ತುಪ್ರದರ್ಶನಗಳು ಗಮನ ಸೆಳೆದವು. ಸಮೂಹ ಸಂಪನ್ಮೂಲ ವ್ಯಕ್ತಿ ಸಿದ್ದು ನೇಸರಗಿ, ಮುಖ್ಯಶಿಕ್ಷಕ ಅನಿಲ ರಾಜನ್ನವರ, ಎಸ್ಡಿಎಂಸಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು. ಶಿಕ್ಷಕಿ ಎಸ್. ಎಸ್. ರೇಶ್ಮಿ ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net