ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಅಗತ್ಯ

HUN-MAY-10-6(HEALTH DEPT PROGRAMME)
Published on

ಹುಣಸೂರು: ತಾಲೂಕಿನ ಗಾವಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಧಾನಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನ ಕಾರ್ಯಕ್ರಮದಡಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಅಗತ್ಯತೆ ಕುರಿತು ಅರಿವು ಮೂಡಿಸಲಾಯಿತು.


ಆರೋಗ್ಯ ನಿರೀಕ್ಷಕ ಹನುಮಂತು ಮಾತನಾಡಿ, ಗರ್ಭಿಣಿಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರಬೇಕು. ದ್ವಿದಳ ಧಾನ್ಯಗಳು, ತರಕಾರಿ, ಸೊಪ್ಪುಗಳ ಬಳಕೆ ಮಾಡಬೇಕು. ಪ್ರಸವದ ನಂತರ ನವಜಾತ ಶಿಶುವಿನ ಆರೈಕೆ ಅತ್ಯಂತ ಸೂಕ್ಷ್ಮವಾಗಿದ್ದು ಆರು ತಿಂಗಳಾದರೂ ತಾಯಿಯು ಎದೆ ಹಾಲು ನೀಡಬೇಕು. ಎರಡು ವರ್ಷಗಳವರೆಗೂ ನೀಡಿದ್ದಲ್ಲಿ ಉತ್ತಮ. ಮಗುವಿಗೆ ಕಾಲಕಾಲಕ್ಕೆ ಅಗತ್ಯ ಲಸಿಕೆಗಳನ್ನು ಹಾಕಿಸಿಕೊಳ್ಳುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.


ಆರೋಗ್ಯ ಸಿಬ್ಬಂದಿ ಇಂದಿರಾ, ಮಾದೇವಿ, ಶಾಂತಮ್ಮ, ಆಶಾಕಾರ್ಯಕರ್ತೆಯರು, ಗರ್ಭಿಣಿಯರು ಮತ್ತು ಬಾಣಂತಿಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net