

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಪಾರಸನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ಅಡಕೆ ಮರಗಳನ್ನು ಮುರಿದು ನಾಶಪಡಿಸಿವೆ.
ಕೊಡಗಿನ ಕಟ್ಟೇಪುರ ಅರಣ್ಯ ಪ್ರದೇಶ ಕಡೆಯಿಂದ ಶುಕ್ರವಾರ ರಾತ್ರಿ ಪಾರಸನಹಳ್ಳಿಯತ್ತ ಬಂದಿರುವ ಮೂರು ಕಾಡಾನೆಗಳು ಶಾರದಮ್ಮ ಎಂಬುವರ 50 ಅಡಕೆ ಮರಗಳನ್ನು ಮುರಿದು ಹಾಳು ಮಾಡಿವೆ.
ಕೆಲ ದಿನಗಳಿಂದ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಸಂಜೆಯಾದೊಡನೆ ಪಾರಸನಹಳ್ಳಿ, ದಾಸನಪುರ ಸೇರಿದಂತೆ ಮಲ್ಲಿಪಟ್ಟಣ ಹೋಬಳಿಯ ಕಾಡಂಚಿನ ಪ್ರದೇಶಗಳಲ್ಲಿ ರೈತರ ಬೆಳೆಗಳನ್ನು ತುಳಿದು ನಷ್ಟಪಡಿಸುತ್ತಿವೆ.