

ಉಳ್ಳಾಲ: ಕಳೆದ 13 ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿರುವ ಸಂಸ್ಥೆಯು ಅಳೇಕಲ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ಉಚಿತವಾಗಿ ವಿತರಿಸುತ್ತಿದೆ. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ನುಸ್ರತುಲ್ ಮಸಾಕಿನ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ತ್ವಾಹಾ ಹೇಳಿದರು.
ಅಲೇಕಳ ನುಸ್ರತುಲ್ ಮಸಾಕೀನ್ ಚಾರಿಟೆಬಲ್ ಟ್ರಸ್ಟ್ ಮತ್ತು ಮದನಿ ಎಜುಕೇಶನ್ ಅಸೋಸಿಯೇಶನ್ ಸಹಯೋಗದಲ್ಲಿ ಶುಕ್ರವಾರ ಅಲೇಕಳ ಸಂಸ್ಥೆಯ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮದನಿ ವಿದ್ಯಾಸಂಸ್ಥೆಯ ನಿವೃತ್ತ ಶಿಕ್ಷಕ ಕಮಲಾಕ್ಷ, ಹಳೇ ವಿದ್ಯಾರ್ಥಿ ಅಬ್ಬಾಸ್ ಮಂಚಿಲ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫತಾಕ್, ಕೋಶಾಧಿಕಾರಿ ಅರಬಿ, ನುಸ್ರತುಲ್ ಮಸಾಕಿನ್ ಉಪಾಧ್ಯಕ್ಷ ಯು.ಎಸ್.ಹನೀಫ್, ಅಲ್ತಾಫ್ ಯು.ಎಚ್., ಯು.ಎ.ಇಸ್ಮಾಯಿಲ್, ಫಾರೂಕ್ ಮಾರ್ಗತಲೆ, ತ್ವಾಹಾ ಅಲೇಕಳ, ಯು.ಪಿ.ಅಮೀರ್, ಕೆ.ಎನ್.ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು. ಯು.ಪಿ.ಹಮೀದ್ ವಂದಿಸಿದರು. ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.