ಸಾಂಪ್ರದಾಯಿಕ ಕೃಷಿ ಮೂಲೆಗುಂಪು : ಮೋಹನ್‌ದಾಸ್ ಕಳವಳ

New Project (11)
Published on

ಹಳೆಯಂಗಡಿ: ಯುವ ಸಮಾಜ ಕೃಷಿಯಿಂದ ವಿಮುಖರಾಗಿರುವ ಕಾರಣ ಸಾಂಪ್ರದಾಯಿಕ ಕೃಷಿ ಮೂಲೆಗುಂಪಾಗುತ್ತಿದ್ದು ಸಂಘಟನೆಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಶ್ಲಾಘನೀಯ ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಮೋಹನ್‌ದಾಸ್ ಹೇಳಿದರು.

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಭಾನುವಾರ ತೋಕೂರು ಕೃಷಿಕ ಗಣೇಶ್ ಅಮೀನ್ ನೇತೃತ್ವದಲ್ಲಿ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಣೇಶ್ ಅಮೀನ್ ಮಾತನಾಡಿ, ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕುಡಿಯುವ ನೀರು ಹಾಗೂ ತುಳು ಮಣ್ಣಿನ ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರ ಉಳಿಸುವ ಕಾರ್ಯ ಸಂಸ್ಥೆಯಿಂದ ನಡೆಯುತ್ತಿರುವುದು ಸ್ತುತ್ಯರ್ಹ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಜಗದೀಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ, ಕೋಶಾಧಿಕಾರಿ ಜಗದೀಶ್ ಕುಲಾಲ್, ಕ್ರೀಡಾ ಕಾರ್ಯದರ್ಶಿ ಗೌತಮ್, ಮಾಜಿ ಅಧ್ಯಕ್ಷ ದೀಪಕ್ ಸುವರ್ಣ, ಸದಸ್ಯರಾದ ಚಂದ್ರಶೇಖರ್ ದೇವಾಡಿಗ, ಕಿರಣ್ ದೇವಾಡಿಗ, ಕುಮಾರ್, ಗಣೇಶ್ ಅಮೀನ್, ಸೋಮನಾಥ್, ಆರ್ಯನ್, ನಿಶಾನ್, ಗ್ರಾಮಸ್ಥರಾದ ಗಣೇಶ್ ಆಚಾರ್ಯ ಮತ್ತಿತರರು ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net