ನರ್ಸಿಂಗ್​ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ! ಪ್ರಕರಣ ಬೆನ್ನತ್ತ ಪೊಲೀಸರಿಂದ ಸ್ಫೋಟಕ ರಹಸ್ಯ ಬಯಲು

love case
Published on

ಬಾಗಲಕೋಟೆ: ನಗರದ ನರ್ಸಿಂಗ್​ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಘಟಪ್ರಭಾ ನದಿಯ ನಾಲೆಯಲ್ಲಿ ಶವ ಪತ್ತೆಯಾಗಿದೆ.

ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಯುವತಿ ಜ್ಯೋತಿ ಭಾಗವ್ವಗೋಳ(22) ಮೃತೆ. ನರ್ಸಿಂಗ್ ಓದುತ್ತಿದ್ದ ಈಕೆ ಬಾಗಲಕೋಟೆಯ ವಿನಾಯಕ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದಳು. ಓದುತ್ತಲೇ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಫೆ.13ರಂದು ಕೆಲಸಕ್ಕೆಂದು ಹೋದವಳು ಮನೆಗೆ ವಾಪಸ್​ ಬಂದಿರಲಿಲ್ಲ. ಕಂಗಾಲಾದ ಕುಟುಂಬಸ್ಥರು ಯುವತಿ ಬಾಗಲಕೋಟೆ ನಗರ ಠಾಣೆಯಲ್ಲಿ ನಾಪತ್ತೆ ಕೇಸ್​ ದಾಖಲಿಸಿದ್ದರು. ಪ್ರಕರಣ ಬೆನ್ನತ್ತಿದ್ದ ಪೊಲೀಸರಿಂದ ಸ್ಫೋಟಕ ರಹಸ್ಯ ಬಯಲಾಗಿದೆ. ಇದನ್ನೂ ಓದಿರಿ ಮೊನ್ನೆ ನಾಯಿ ಮೇಲೆ ಅತ್ಯಾಚಾರ, ನಿನ್ನೆ ಭಿಕ್ಷುಕಿ ಮೇಲೆ ಕಾಮುಕರ ಅಟ್ಟಹಾಸ

ನಾಪತ್ತೆಯಾಗಿದ್ದ ಜ್ಯೋತಿ ಘಟಪ್ರಭಾ ನದಿ ನೀರಲ್ಲಿ ಶವವಾಗಿ ಪತ್ತೆಯಾದ ಬಳಿಕ ಈ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಈ ಕೇಸ್​ ಬಗ್ಗೆ ತನಿಖೆ ಚುರುಕುಗೊಳಿಸಿದ್ದ ಪೊಲೀಸರಿಗೆ ಜ್ಯೋತಿ ಮತ್ತು ಹನೀಫ್ ಬೀಳಗಿ ಪ್ರೀತಿ ಮಾಡುತ್ತಿದ್ದ ವಿಷಯ ತಿಳಿಯಿತು. ಕಲಾದಗಿ ಗ್ರಾಮದ ಹನೀಫ್ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲ್ಸ ಮಾಡುತ್ತಿದ್ದ. ಈ ವೇಳೆ ಜ್ಯೋತಿ ಮತ್ತು ಹನೀಫ್​ ಇಬ್ಬರೂ ಸ್ನೇಹಿತರಾಗಿ, ಬಳಿಕ ಪ್ರೀತಿಗೆ ತಿರುಗಿದೆ.

ಇವರಿಬ್ಬರ ಪ್ರೀತಿ ವಿಚಾರ ಮೊದಲೇ ಗೊತ್ತಿದ್ದ ಯುವತಿ ಕುಟುಂಬಸ್ಥರು, ಧರ್ಮ ಬೇರೆ-ಬೇರೆ ಇದೆ. ಪ್ರೀತಿ-ಗೀತಿ ಯಾವುದೂ ಬೇಡ ಎಂದು ಬುದ್ಧಿವಾದ ಹೇಳಿದ್ದರಂತೆ.

ಇದಾದ ಬಳಿಕ ಅಂದರೆ ಫೆ.13ರಂದು ಜ್ಯೋತಿಯನ್ನ ಪುಸಲಾಯಿಸಿ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ ಭಗ್ನಪ್ರೇಮಿ ಹನೀಫ್​, ಪ್ರೇಯಸಿಯ ಶೀಲದ ಬಗ್ಗೆ ಶಂಕಿಸಿ ಕುತ್ತು ಹಿಸುಕಿ ಕೊಲೆಗೈದಿದ್ದ. ಸಾಕ್ಷಿ ನಾಶ ಮಾಡಲು ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾತರಕಿ ಸೇತುವೆಗೆ ಎಸೆದು ಪರಾರಿಯಾಗಿದ್ದ. ಪ್ರಕರಣ ಬೆನ್ನಹತ್ತಿದ ಪೊಲೀಸರು ಕೊಲೆ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿ ಹನೀಫ್​ನನ್ನು ಬಂಧಿಸಿದ್ದಾರೆ. ಮೃತಳ ಕುಟುಂಬಸ್ಥರು ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net