

ಹುಬ್ಬಳ್ಳಿ: ಇಲ್ಲಿಯ ಸೆಟ್ಲಮೆಂಟ್ ಕೊರಮ ಸಮಾಜ ಪಂಚ ಕಮಿಟಿ ವತಿಯಿಂದ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯನವರ 916ನೇ ಜಯಂತ್ಯುತ್ಸವ ಆ. 31ರಂದು ಸಂಜೆ 6ಕ್ಕೆ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.
ಸಂಜೆ 4ಕ್ಕೆ ಸೆಂಟ್ಲಮೆಂಟ್ನಲ್ಲಿ ಮೆರವಣಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ನಂತರ ಸೆಟ್ಲಮೆಂಟ್ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಮಿಟಿ ಅಧ್ಯಕ್ಷ ಎಂ.ಎಂ. ಗೋಕಾಕ ಅಧ್ಯಕ್ಷತೆ ವಹಿಸುವರು.
ಶಾಸಕ ಪ್ರಸಾದ ಅಬ್ಬಯ್ಯ, ಶಿಕ್ಷಕ, ಸಾಹಿತಿ ನಾರಾಯಣ ಭಜಂತ್ರಿ, ಪಾಲಿಕೆ ಸದಸ್ಯೆ ಮಂಜುಳಾ ಜಾಧವ, ದುರ್ಗಮ್ಮ ಬಿಜವಾಡ ಅತಿಥಿಗಳಾಗಿ ಪಾಲ್ಗೊಳ್ಳುವರು.