ಮಾಸ್ಕೇರಿ ಎಂ.ಕೆ. ನಾಯಕಗೆ ನುಡಿಸಿರಿ ಪ್ರಶಸ್ತಿ

Nudisiri Award
Published on

ಬೆಂಗಳೂರು: ಹಿರಿಯ ಕವಿ ದಿ. ಜರಗನಹಳ್ಳಿ ಶಿವಶಂಕರ್ ಹೆಸರಿನಲ್ಲಿ ಕರ್ನಾಟಕ ವಿಕಾಸ ರಂಗ ನೀಡುವ ‘ನುಡಿಸಿರಿ’ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಕವಿ ಮಾಸ್ಕೇರಿ ಎಂ.ಕೆ. ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5 ಸಾವಿರ ನಗದು ಹಾಗೂ ಲಕ ಒಳಗೊಂಡಿದೆ. ಜೂನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net