ಸಮಾಜದಲ್ಲಿ ಉನ್ನತ ಗೌರವಕ್ಕೆ ಪಾತ್ರ : ಶ್ರೀಧರ ಜಿ.ಭಿಡೆ ಹೇಳಿಕೆ

6
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ದಿ.ಪದ್ಮನಾಭ ಎನ್.ಮಾಣಿಂಜ ಅವರು ಸರ್ಕಾರಿ ಉನ್ನತ ಸೇವೆ ಅನುಭವವನ್ನು ಸಂಘಕ್ಕೆ ಉಪಾಧ್ಯಕ್ಷ, ನಿರ್ದೇಶಕರಾಗಿ ನೀಡಿದ್ದರು. ಸಮಾಜದಲ್ಲಿ ಉನ್ನತ ಗೌರವಕ್ಕೆ ಪಾತ್ರರಾಗಿದ್ದರು ಎಂದು ಸಂಘ ಅಧ್ಯಕ್ಷ ಶ್ರೀಧರ ಜಿ.ಭಿಡೆ ಎಂದರು.

ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ, ಉಜಿರೆ ಸಂಸ್ಕರಣಾ ಸಹಕಾರಿ ಸಂಘ ಮಾಜಿ ಉಪಾಧ್ಯಕ್ಷ, ಹಾಲಿ ನಿರ್ದೇಶಕ ದಿ.ಪದ್ಮನಾಭ ಎನ್.ಮಾಣಿಂಜ ಅವರಿಗೆ ನುಡಿನಮನ ಕಾರ್ಯಕ್ರಮ ಸಂಘದ ದಿ.ಜಿ.ಎನ್.ಭಿಡೆ ಸಭಾಭವನದಲ್ಲಿ ನಡೆಯಿತು.

ಉಪಾಧ್ಯಕ್ಷ ಎಂ.ಅನಂತ ಭಟ್ ಮಾತನಾಡಿ, ದಿ.ಪದ್ಮನಾಭ ಎನ್.ಮಾಣಿಂಜ ಅವರು ಕಾರ್ಯಸಾಧನೆಯಲ್ಲಿನ ಧೀಮಂತಿಕೆ, ಒಡನಾಟ ನೆನಪಿಸಿಕೊಂಡು ಗೌರವ ಸಮರ್ಪಿಸಿ ಎಂದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಮಾತನಾಡಿ, ಸಂಘದಲ್ಲಿ ಆರಂಭ ದಿನಗಳಲ್ಲೇ ಸದಸ್ಯರಾಗಿದ್ದ ದಿ.ಪದ್ಮನಾಭ ಎನ್.ಮಾಣಿಂಜ ಸಂಘದಲ್ಲಿ 2005-2020ರ ಅವಧಿಗೆ ಉಪಾಧ್ಯಕ್ಷರಾಗಿ, 1996ರಿಂದ ಈವರೆಗೂ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಸಂಘದ ಬೆಳವಣಿಗೆಯಲ್ಲಿ ಪಾತ್ರ ವಹಿಸಿದವರು ಎಂದರು.

ಸಂಘದ ನಿರ್ದೇಶಕರಾದ ಜಯಶ್ರೀ ಡಿ.ಎಂ., ಗ್ರೇಸಿಯನ್ ವೇಗಸ್, ಸೋಮನಾಥ ಬಂಗೇರ, ಕೆ.ಜೆೆ.ಅಗಸ್ಟಿನ್, ವಿ.ವಿ.ಅಬ್ರಾಹಂ, ಬಾಲಕೃಷ್ಣ ಗೌಡ ಕೆ., ಅಬ್ರಾಹಂ ಬಿ.ಎಸ್., ಶಶಿಧರ ಡೋಂಗ್ರೆ, ರಾಮ ನಾಯ್ಕ, ಬೈರಪ್ಪ, ಆರ್.ಸುಭಾಷಿಣಿ, ಸಂಘದ ಸಿಬ್ಬಂದಿ ವರ್ಗ ಭಾವಚಿತ್ರಕ್ಕೆ ಗೌರವ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net