ಸದೃಢ ದೇಶಕ್ಕೆ ಎನ್​ಎಸ್​ಎಸ್ ಸಹಕಾರಿ

H25-LXR03- NSS
Published on

ಲಕ್ಷ್ಮೇಶ್ವರ: ಪ್ರತಿಯೊಬ್ಬರೂ ಸಮಾಜಮುಖಿ ಚಿಂತನೆ ಒಳಗೊಂಡಿರಬೇಕು. ಈ ನಿಟ್ಟಿನಲ್ಲಿ ಉತ್ತಮ ಮತ್ತು ಸಶಕ್ತ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಸದೃಢ ದೇಶ ಕಟ್ಟುವಲ್ಲಿ ಎನ್​ಎಸ್​ಎಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಹಸೀಲ್ದಾರ್ ವಾಸುದೇವಸ್ವಾಮಿ ಅಭಿಪ್ರಾಯಪಟ್ಟರು

ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ ಅಗಡಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟೀಯ ಸೇವಾ ಯೋಜನೆಯ 2024-25 ನೇ ಸಾಲಿನ ಕಾರ್ಯವಧಿ ಚಟುವಟಿಕೆ ನೆರವೇರಿಸಿ ಮಾತನಾಡಿದರು.


ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್​ಎಸ್​ಎಸ್ ಸೇವಾ ಮನೋಭಾವದ ಜತೆಗೆ ಭ್ರಾತೃತ್ವ, ಸಹಭಾಳ್ವೆ ಸಂಘಟನೆಯನ್ನು ಬೆಳೆಸುತ್ತದೆ. ಉತ್ತಮ ಸಮಾಜ ನಿರ್ವಣದಲ್ಲಿ ಯುವಶಕ್ತಿಯ ಪಾತ್ರ ಹೆಚ್ಚು ಮಹತ್ವದ್ದಾಗಿದ್ದು, ಇಂತಹ ಸೇವಾ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಎಂದರು.


ಅಗಡಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್. ಹಯವದನ, ಎನ್​ಎಸ್​ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಸೋಮಶೇಖರ್ ಕೆರಿಮನಿ, ಉಪನ್ಯಾಸಕರಾದ ಪೊ›. ಸಿ.ಎಸ್. ಹಿರೇಮಠ, ಪೊ›. ದಯಾನಂದ ಬಡಿಗಣ್ಣವರ, ಪ್ರೊ. ಷಣ್ಮುಖ ಜಿ ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net