

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸಾಕೋಶ ಸಹಯೋಗದಲ್ಲಿ ಕಡಬ ಮತ್ತು ಸುಳ್ಯ ವಲಯದ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಉದ್ಘಾಟನೆ ಕೆಎಸ್ಎಸ್ ಕಾಲೇಜಿನಲ್ಲಿ ನಡೆಯಿತು.
ಕೆ.ಎಸ್.ಎಸ್ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಪ್ರಸಾದ ಎನ್.ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ದಿನೇಶ ಪಿ.ಟಿ ಅಧ್ಯಕ್ಷತೆ ವಹಿಸಿದರು. ಎಸ್ಡಿಎಂ ಕಾಲೇಜು ಸಮಾಜಕಾರ್ಯ ಸ್ನಾತಕೋತ್ತರ ಪದವಿಯ ಸಹಪ್ರಾಧ್ಯಾಪಕಿ ಡಾ.ಅಕ್ಷತಾ ಕಾರಂತ್, ವಿದ್ಯಾರ್ಥಿಗಳಿಗೆ ಜೀವನ ಕೌಶಲದ ಬಗ್ಗೆ ತರಬೇತಿ ನೀಡಿದರು. ಆಂತರಿಕ ಗುಣಮಟ್ಟ ಭರವಸಾಕೋಶ ಸಂಯೋಜಕಿ ಲತಾ ಬಿ.ಟಿ., ವಲಯದ ಸಹ ಸಂಯೋಜನಾಧಿಕಾರಿ ರಾಮಕೃಷ್ಣ ಕೆ.ಎಸ್.ಭಾಗವಹಿಸಿದ್ದರು.
ರಾಜ್ಯದ ಅತ್ಯುತ್ತಮ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಪಡೆದ ಚಿತ್ರಲೇಖ ಕೆ.ಎಸ್. ಅವರನ್ನು ಸನ್ಮಾನಿಸಲಾಯಿತು.ನೆಲ್ಯಾಡಿ, ಬೆಳ್ಳಾರೆ, ಸುಳ್ಯ ಸರ್ಕಾರಿ ಪದವಿ ಕಾಲೇಜ್, ನೆಹರು ಮೆಮೋರಿಯಲ್ ಕಾಲೇಜ್, ಸವಣೂರು ವಿದ್ಯಾರಶ್ಮಿ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳು ಮತ್ತು ಎನ್.ಎಸ್.ಎಸ್ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಡಬ ಮತ್ತು ಸುಳ್ಯ ವಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಆರತಿ ಕೆ.ಸ್ವಾಗತಿಸಿದರು. ಎನ್ಎಸ್ಎಸ್ ಘಟಕ ಕಾರ್ಯಕ್ರಮಾಧಿಕಾರಿ ಸುಮಿತ್ರ ವಂದಿಸಿದರು. ಸಂಖ್ಯಾ ಮತ್ತು ಅಂಕಿತಾ ನಿರೂಪಿಸಿದರು.