ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಕೌಶಲ ಅವಶ್ಯ : ಶಾಸಕಿ ಭಾಗಿರಥಿ ಮುರುಳ್ಯ ಅಭಿಪ್ರಾಯ

New Project (2)
Published on

ಕಡಬ: ಕಾಲೇಜಿಗೆ ಒದಗಿಸಿರುವ ಕಂಪ್ಯೂಟರ್‌ಗಳನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕಿದ್ದು, ಉತ್ತಮ ಅಂಕ ಪಡೆದುಕೊಳ್ಳುವುದರ ಜತೆಗೆ ವಿದ್ಯಾರ್ಥಿಗಳು ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಬೆಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೀಡಿದ ಕಂಪ್ಯೂಟರ್‌ಗಳನ್ನು ಉದ್ಘಾಟಿಸಿ ಮಾತನಾಡಿದರು. ಕಂಪ್ಯೂಟರ್‌ಗಳ ಜತೆಗೆ 20 ಕುರ್ಚಿ, ಪುಸ್ತಕ ಕಪಾಟು, ಪುಸ್ತಕ ಸ್ಟಾೃಂಡ್‌ಗಳನ್ನು ಹಸ್ತಾಂತರಿಸಲಾಯಿತು.

ಬಿ.ಎ, ಬಿ.ಕಾಂ, ಬಿಬಿಎ ಕೋರ್ಸ್‌ಗಳಿಗೆ ಮೊದಲ 50 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡುವ ಕುರಿತು ನಿರ್ಧರಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ವೆಂಕಟೇಶ ಭಟ್ ಪಿ.ಕೊಯಕ್ಕುಡೆ, ಸತೀಶ್ ಮಾರ್ಕಾಜೆ, ಶೀನಪ್ಪ ಗೌಡ ಬೈತ್ತಡ್ಕ, ಗೌರಿ ಕಾರ್ಲಾಡಿ, ಸೀತಾರಾಮ ಗೌಡ ಮುಂಡಾಳ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಶಂಕರ ಭಟ್ ಪಿ. ಸ್ವಾಗತಿಸಿದರು. ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net