ಗುರಿ ಸಾಧಿಸುವಲ್ಲಿ ವಿಫಲರಾದರೆ ಶಿಸ್ತು ಕ್ರಮ

ZP CEO Priyanga M
Published on

ಕಾರವಾರ: ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ವಿವಿಧ ಇಲಾಖೆಗಳಿಗೆ ನೀಡಿರುವ ಗುರಿಯನ್ನು ಸಮಯಕ್ಕೆ ಸರಿಯಾಗಿ ಸಾಧಿಸದೇ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಜಿಪಂ ಸಿಇಒ ಪ್ರಿಯಾಂಗಾ ಎಂ.ಎಚ್ಚರಿಸಿದರು.
ಜಿಪಂ ಕಚೇರಿಯಲ್ಲಿ ಮಂಗಳವಾರ ಉದ್ಯೋಗ ಖಾತ್ರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟಿ್ರಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡ, ಎರೆಹುಳು ಗೊಬ್ಬರ ತೊಟ್ಟಿ, ಕೃಷಿ ಬಾವಿ, ಬದು ನಿರ್ವಣ, ಅರಣ್ಯ ಟ್ರಂಚ್, ನರ್ಸರಿ, ರೇಷ್ಮೆ ಬೆಳೆ, ರಸ್ತೆ ನಿರ್ವಣ, ಸಾರ್ವಜನಿಕ ಕೆರೆ, ಬಾವಿ, ಶೌಚಗೃಹ ಬಚ್ಚಲು ಗುಂಡಿ ನಿರ್ವಣದಂತ ಕಾಮಗಾರಿಗಳನ್ನ ಕೈಗೊಂಡು ಮಾನವ ದಿನ ಸೃಜನೆಗೆ ನಿಗದಿತ ಗುರಿಯನ್ನ ನೀಡಲಾಗಿದೆ.
ಆದರೆ, ಅನುಷ್ಠಾನ ಇಲಾಖೆಗಳು ಸಮಯಕ್ಕೆ ಸರಿಯಾಗಿ ಕಾಮಗಾರಿ ನಡೆಸಿ ನಿಗದಿತ ಗುರಿ ಸಾಧಿಸುವಲ್ಲಿ ವಿಳಂಬ ಮಾಡುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಿಲ್ಲೆಗೆ ನೀಡಿದ ನಿಗದಿತ ಗುರಿ ಸಾಧನೆಗೆ ಈ ರೀತಿ ವಿಳಂಬವಾಗುವುದನ್ನ ಸಹಿಸಲು ಸಾಧ್ಯವಿಲ್ಲ ಎಂದರು.
ಗ್ರಾಮ ಪಂಚಾಯಿತಿ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ನಿಡಲಾಗಿರುವ ನಿಗದಿತ ಗುರಿಯನ್ನು ಸಮಯಕ್ಕೆ ಸರಿಯಾಗಿ ಸಾಧಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net