360 ಕೋಟಿ ರೂ.ಸರ್ಕಾರಿ ಭೂ ಕಬಳಿಕೆ

NRR PRESSSMEET
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು 

ಯಶವಂತಪುರದ ಕ್ಷೇತ್ರದ ದೊಡ್ಡಬೆಲೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 360 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತನ್ನು ಕಬಳಿಸಲಾಗಿದೆ. ಈ ಸಂಬಂಧ ಇಬ್ಬರು ಹೋರಾಟಗಾರರ ಭೀಕರ ಹತ್ಯೆಗಳು ನಡೆದಿವೆ ಬೆಂಗಳೂರು ದಣ ಬಿಜೆಪಿ ಮಾಜಿ ಅಧ್ಯಕ್ಷ ಎನ್​. ಆರ್​. ರಮೇಶ್​ ಆರೋಪಿಸಿದ್ದು, ಸಿಎಂ, ಗೃಹಸಚಿವ, ನಗರ ಜಿಲ್ಲಾಧಿಕಾರಿ ಹಾಗೂ ಪೊಲೀಸ್​ ಆಯುಕ್ತರಿಗೆ ದಾಖಲೆ ಸಮೇತ ದೂರು ನೀಡಿದ್ದು, ಮರುತನಿಖೆಗೆ ಆಗ್ರಹಿಸಿದ್ದಾರೆ.

ಪಾಲಿಕೆಯ ಗಡಿ ಭಾಗದಿಂದ ಕೇವಲ 20 ಅಡಿಗಳಷ್ಟು ದೂರದಲ್ಲಿ ಇರುವ, ಸದರಿ ದೊಡ್ಡಬೆಲೆ ಗ್ರಾಮದ 39 ಎಕರೆ ವಿಸ್ತೀರ್ಣದ ಸ್ವತ್ತು ಸಂಪೂರ್ಣವಾಗಿ "ಸರ್ಕಾರಿ ಸ್ವತ್ತು' ಆಗಿರುತ್ತದೆ. ಹಿಡುವಳಿ ಕಾಯ್ದೆ&1974 ಅಡಿಯಲ್ಲಿ ನಾರಾಯಣಪ್ಪ ಎಂಬಾತನ ಪತ್ನಿಯ ತಂದೆ ನರಸಿಂಹಯ್ಯ ಹಾಗೂ ಲಕ್ಕಪ್ಪ ಎಂಬಾತನ ಪತ್ನಿಯ ತಂದೆ ಚೆನ್ನಪ್ಪ ಎಂಬುವವರ ಹೆಸರಿಗೆ ಹಸ್ತಾಂತರಿಸಿ, ನಕಲಿ ದಾಖಲೆಗಳನ್ನು ನಿರ್ಮಿಸಿ, ಸ್ಥಳಕ್ಕೆ ಕಾಂಪೌಂಡ್​ ಕೂಡ ಹಾಕಲಾಗಿದೆ. ಅದರಲ್ಲಿ 15 ಎಕರೆ ವಿಸ್ತೀರ್ಣದ ಸ್ವತ್ತನ್ನು 75 ವರ್ಷಗಳ ಹಿಂದೆಯೇ ನಾರಾಯಣಪ್ಪ ಮತ್ತು ಲಕ್ಕಪ್ಪ ಸಹೋದರರ ತಾತ ಮುನ್ನೂರು ರೂಪಾಯಿಗಳಿಗೆ ಮಾರಾಟ ಮಾಡಿರುವುದಾಗಿ ದಾಖಲೆ ಸೃಷ್ಟಿಸಲಾಗಿದೆ. ಈ 15 ಎಕರೆ ವಿಸ್ತೀರ್ಣದ ಸ್ವತ್ತು ಹಲವರ ಹೆಸರುಗಳಿಗೆ ಪರಭಾರೆಯಾಗಿ ಗೌರಿಬಿದನೂರಿನ ಶಾಸಕ ಪುಟ್ಟಸ್ವಾಮಿಗೌಡರ ಕುಟುಂಬಸ್ಥರ ಸುಪರ್ದಿಗೆ ಬಂದಿರುತ್ತದೆ. ಈ ಸರ್ಕಾರಿ ಸ್ವತ್ತಿನ ಮಾರುಕಟ್ಟೆ ಮೌಲ್ಯ ಕನಿಷ್ಠ 225 ಕೋಟಿ ರೂ.ಗಳಿಗೂ ಅಧಿಕವಿರುತ್ತದೆ. ಉಳಿದ 24 ಎಕರೆ ವಿಸ್ತೀರ್ಣದ ಸ್ವತ್ತು ಎಕರೆಯೊಂದಕ್ಕೆ 15 ಕೋಟಿ ರೂ.ಗಳಂತೆ ಒಟ್ಟು 360 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯವನ್ನು ಹೊಂದಿರುತ್ತದೆ ಎಂದು ತಿಳಿಸಿದರು.

ನಾರಾಯಣಪ್ಪ ನವರ ಪತ್ನಿ ಮುನಿನರಸಮ್ಮ ಅವರು ದೊಡ್ಡಬೆಲೆಯ "ಎಚ್​. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದವರು.

ಸ್ವತ್ತು ಮರುವಶಕ್ಕೆ ಪಡೆದಿಲ್ಲ

* ಮುಖ್ಯಮಂತ್ರಿಗಳ ಕಚೇರಿ ಮತ್ತು ಕಂದಾಯ ಸಚಿವರ ಕಚೇರಿಯಿಂದಲೇ ಆದೇಶ ಇದ್ದರೂ 50 ದಿನಗಳೇ ಕಳೆದಿದ್ದರೂ ಸರ್ಕಾರಿ ಸ್ವತ್ತನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ಇದುವರೆಗೂ ಸಾಧ್ಯವಾಗಿಲ್ಲ.

* ಸರ್ಕಾರಿ ಭೂ ಕಬಳಿಕೆ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನಲ್ಲಿ "ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ'ಯನ್ನು ದಾಖಲಿಸಲಾಗುತ್ತಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net