ಇನ್ಮುಂದೆ ಶಾಸಕ ಸತೀಶ್​ ರೆಡ್ಡಿ ಮನೆಗೆ ಸಾರ್ವಜನಿಕರ ಪ್ರವೇಶಕ್ಕೂ ಕಟ್ಟುನಿಟ್ಟು; ಕಾರಣವಿದು...

Reddy
Published on

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಮನೆಗೆ ಇನ್ನುಮುಂದೆ ಸಾರ್ವಜನಿಕರ ಪ್ರವೇಶಕ್ಕೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಪೊಲೀಸ್ ಬಂದೋಬಸ್ತ್ ಹಾಕಿರುವುದಷ್ಟೇ ಅಲ್ಲದೆ ಹೆಚ್ಚುವರಿಯಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಈ ಮೊದಲು ಶಾಸಕರ ಮನೆ ಬಳಿ ಆರು ಸಿಸಿಟಿವಿ ಕ್ಯಾಮರಾಗಳಷ್ಟೇ ಇದ್ದು, ಇದೀಗ ಹೊಸದಾಗಿ ಹತ್ತು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಶಾಸಕರ ಮನೆ ಎದುರು ಹಾಗೂ ಹಿಂದಿನ ರಸ್ತೆ ಸೇರಿದಂತೆ ಸುತ್ತಮುತ್ತ ಹತ್ತು ಕ್ಯಾಮರಾ ಅಳವಡಿಸಲಾಗಿದೆ.

ಇನ್ನು ಶಾಸಕರ ಮನೆ ಬಳಿ ಯಾರೇ ಸುಳಿದಾಡಿದರೂ ತಕ್ಷಣ ಗೊತ್ತಾಗಲಿದೆ. ಮಾತ್ರವಲ್ಲ, ಸಾರ್ವಜನಿಕರು ಈ ಹಿಂದೆ ಅವರ ಮನೆಗೆ ನೇರವಾಗಿ ಪ್ರವೇಶಿಸುವಂತಿತ್ತು. ಆದರೆ ಇನ್ನುಮುಂದೆ ಸಾರ್ವಜನಿಕರ ಪ್ರವೇಶಕ್ಕೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಭದ್ರತೆಗೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಯಾರೇ ಬಂದರೂ ಪೊಲೀಸರ ತಪಾಸಣೆ ಎದುರಿಸಿ ಅಥವಾ ಅನುಮತಿ ಪಡೆದೇ ಒಳಪ್ರವೇಶಿಸಬೇಕಾಗಿದೆ.

ಅಷ್ಟಕ್ಕೂ ಶಾಸಕರ ಮನೆಗೆ ಈ ಎಲ್ಲ ಭದ್ರತೆ ಕಲ್ಪಿಸಲು ಪ್ರಮುಖ ಕಾರಣ ಇತ್ತೀಚೆಗೆ ಅಂದರೆ ಆ. 12ರ ಬೆಳಗಿನ ಜಾವ ಶಾಸಕರ ಮನೆಯಲ್ಲಿದ್ದ ಕಾರಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟು ಸುಟ್ಟು ಹಾಕಿದ್ದು. ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net