

ಗುಂಡ್ಲುಪೇಟೆ: ಮುಚ್ಚಲು ಮುಂದಾಗಿದ್ದ ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಎಸ್‌ಎನ್‌ಎಲ್ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪಾಲಕರಿಂದ ಮಾಹಿತಿ ಪಡೆದರು.
ಮಕ್ಕಳ ಹಾಗೂ ಶಿಕ್ಷಕರ ಕೊರತೆಯಿಂದ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಆಡಳಿತ ಮಂಡಳಿ ಮುಂದಾಗಿದ್ದರಿಂದ ಆತಂಕಕ್ಕೊಳಗಾದ ಪಾಲಕರ ದೂರಿನ ಮೇರೆಗೆ ಅಧಿಕಾರಿಗಳು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಅರಸ್ ಬುಧವಾರ ಭೇಟಿ ನೀಡಿ ಶಿಕ್ಷಣ ಇಲಾಖೆಯ ಅನುಮತಿಯಿಲ್ಲದೆ ಯಾವುದೇ ಕಾರಣಕ್ಕೂ ಶಾಲೆ ಮುಚ್ಚದಂತೆ ಸೂಚನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಗ್ರಾಮದ ಮುಖಂಡ ಮಾಡ್ರಹಳ್ಳಿ ನವೀನ್, ಕರ್ನಾಟಕ ಕಾವಲು ಪಡೆಯ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲಿಕ್, ಅಬ್ದುಲ್ ರಷೀದ್ ಹಾಗೂ ಪಾಲಕರು, ಮಕ್ಕಳು ಹಾಜರಿದ್ದರು.