

ಹೆಬ್ರಿ: ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾರಂಭೋತ್ಸವ ಇತ್ತೀಚೆಗೆ ಆಚರಿಸಲಾಯಿತು. ಒನ್ ಗುಡ್ ಸ್ಟೆಪ್ ಸಂಸ್ಥೆ ವತಿಯಿಂದ ಉಚಿತ ನೋಟುಪುಸ್ತಕ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪಠ್ಯಪುಸ್ತಕ ವಿತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎಲ್ ವಿಶ್ವಾಸ, ಡಿಐಇಟಿ ಉಡುಪಿ ಪ್ರಾಂಶುಪಾಲ ಡಾ.ಅಶೋಕ ಕಾಮತ್, ಉಪನ್ಯಾಸಕ ಯೋಗಾನಂದ, ಒನ್ ಗುಡ್ ಸ್ಟೆಪ್ ನಿರ್ದೇಶಕಿ ಅನಿತಾ ಪೈ, ಮಿಷೆಲ್ ಇಂಡಸ್ಟ್ರಿಯ ಎಲ್.ಆಚಾರ್ಯ, ಹರೀಶ್ ಶಾನಭಾಗ, ಮಂಜುನಾಥ ಭಟ್, ಪ್ರಕಾಶ್ ಪ್ರಭು, ಅಧ್ಯಾಪಕರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.