ಪಡುಕುಡೂರು ಸರ್ಕಾರಿ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ

hbr-1
Published on

ಹೆಬ್ರಿ: ತಾಲೂಕಿನ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ‘ಬದಲಾವಣೆಯ ಶಿಕ್ಷಣ ಭವಿಷ್ಯದ ನಿರ್ವಾಣ’ ಧ್ಯೇಯದಡಿಯಲ್ಲಿ ಶಾಲಾ ಪ್ರಾರಂಭೋತ್ಸವ ಅದ್ಧೂರಿಯಾಗಿ ಆಚರಿಸಲಾಯಿತು.

ಸ್ವಾತಂತ್ರ್ಯ ಸೇನಾನಿ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ಅವರ ಪ್ರತಿಮೆಗೆ ವಾಲಾಪರ್ಣೆ ವಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಕ್ಕಳಿಗೆ ಬಲೂನುಗಳನ್ನು ನೀಡಿ ಚಪ್ಪಾಳೆಯೊಂದಿಗೆ ಶುಭ ಹಾರೈಸಿ ಶಾಲೆಗೆ ಬರ ವಾಡಿಕೊಳ್ಳಲಾಯಿತು.

ವಿದ್ಯಾರ್ಥಿಗಳಿಗೆ ಬಾಲ್ಬೆಟ್ಟು ಕಮಲಾಕ್ಷಿ ಶೆಟ್ಟಿ ಮತ್ತು ಮಕ್ಕಳು ಹಾಗೂ ಮನೆಯವರು ಕೊಡವಾಡಿದ ಶಾಲಾ ಬ್ಯಾಗ್ ಮತ್ತು ಲೇಖನ ಸಾವಾಗ್ರಿಗಳನ್ನು ವಿತರಿಸಲಾಯಿತು. ಸರ್ಕಾರದಿಂದ ನೀಡಿದ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಉಪಾಧ್ಯಕ್ಷ ಹರೀಶ ಪೂಜಾರಿ, ಹಳೇ ವಿದ್ಯಾರ್ಥಿ ಸಂದ ಗೌರವ ಸಲಹೆಗಾರ ಸಂತೋಷ ಆಚಾರ್ಯ, ಗ್ರಾವಾಭಿವೃದ್ಧಿ ಯೋಜನೆಯ ಪಡುಕೂಡೂರಿನ ಸೇವಾ ಪ್ರತಿನಿಧಿ ಚಿತ್ರ ಪೂಜಾರಿ, ಶಾಲಾ ಮುಖ್ಯ ಶಿಕ್ಷಕ ಹರೀಶ ಪೂಜಾರಿ.ಎಸ್, ಶಿಕ್ಷಕರಾದ ಶೃತಿ, ಶಾಲಿನಿ ಸುಕುವಾರ್ ಆಚಾರ್ಯ, ಸುಜಾತ, ಸುದರ್ಶನ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಸವಿತಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.  ಮುಖ್ಯಶಿಕ್ಷಕ ಹರೀಶ ಪೂಜಾರಿ ಪ್ರಸ್ತಾವನೆಗೈದು ಸ್ವಾಗತಿಸಿ ಶೈಕ್ಷಣಿಕ ಮತ್ತು ಶಾಲಾಭಿವೃದ್ಧಿ ಚಟುವಟಿಕೆಗಳ ವಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net