ಸಣ್ಣ ಸಣ್ಣ ಸಮುದಾಯಗಳಿಗೆ ರಾಜಕೀಯ ಅವಕಾಶಕ್ಕಾಗಿ ಬೀದಿಗಿಳಿಯಲು ಸಿದ್ಧ ಎಂದ ಹರಿಪ್ರಸಾದ : ಸಿಎಂ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು

FB_IMG_1693699096958
Published on

ನಾನು ಸಿದ್ದರಾಮಯ್ಯ ಅವರ ವಕ್ತಾರ ಅಲ್ಲ ಎಂದ ಬಿ.ಕೆ.ಹರಿಪ್ರಸಾದ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಂತ್ರಿ ಆಗುವುದು ನನಗೆ ದೊಡ್ಡ ವಿಚಾರ ಅಲ್ಲ. ಸರ್ಕಾರದಲ್ಲಿ, ಆಡಳಿತದಲ್ಲಿ ಸಣ್ಣ  ಅತಿ ಸಣ್ಣ ಸಮುದಾಯಗಳಿಗೂ ರಾಜಕೀಯ ಅವಕಾಶ ಸೀಗಬೇಕು ಎಂಬುದು ನನ್ನ  ಒತ್ತಾಸೆ. ಅದಕ್ಕಾಗಿ ರಸ್ತೆಗಿಳಿದು ಹೋರಾಟ ಮಾಡಲು ಸಹ ಸಿದ್ಧನಿz್ದೆÃನೆ ಎಂದು  ವಿಧಾನ ಪರಿಷತ್ ಸದಸ್ಯರಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ ಹೇಳಿದರು.
ಅತಿ ಹಿಂದುಳಿದ ಮುಖಂಡರ ಜತೆಗೆ ಆಪ್ತ ಸಮಾಲೋಚನೆ ನಡೆಸಲು ಮತ್ತು ಸಮಾಜದ ಗುರುಗಳ ಭೇಟಿಗಾಗಿ ಶನಿವಾರ ಕಲಬುರಗಿಗೆ ಆಗಮಿಸಿದ್ದ ಅವರು ಭೇಟಿಯಾದ ಪತ್ರಕರ್ತರ ಜತೆ ಮಾತನಾಡಿ,  ಹಿಂದುಳಿದ ವರ್ಗದ ಬಗ್ಗೆ ಜಾಗೃತಿ ಮೂಡಿಸಿದವರು ದೇವರಾಜ ಅರಸು ಅವರು. ಹಿಂzಳಿದ ವರ್ಗದವರಿಗೆ ಏನಾದರೂ ಮಾಡಿದವರು ಅಂದರೆ ಅದು ದೇವರಾಜ ಅರಸು, ಬಂಗಾರಪ್ಪನವರು ಎನ್ನುವ ಮೂಲಕ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ ಬಿಕೆ ಹರಿಪ್ರಸಾದï.
ಹಿಂದುಳಿದ ವರ್ಗ ಹಾಗೂ ಹಿಂದುಳಿದ ಜಾತಿ ನಡುವೆ ಬಹಳ ವ್ಯತ್ಯಾಸವಿದೆ. ನಾನು ಸಿದ್ದರಾಮಯ್ಯ ಅವರ ವಕ್ತಾರ ಅಲ್ಲ. ಈ ವಿಷಯದಲ್ಲಿ ಇಂದಿರಾ ಗಾಂಧಿ ಅವರಿಂದ ಕಲಿಯಬೇಕಾಗಿರುವುದು ಸಾಕಷ್ಟಿದೆ. ನಾನು ಪಕ್ಕಾ ಕಾಂಗ್ರೆಸ್‌ನವನು.ಒAದೇ ಒಂದೂ ದಿನ ಬೇರೆ ಪP್ಷÀದ ಕಡೆ ನಾನು  ತಿರುಗಿಯೂ ನೋಡಿದವನಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಪP್ಷÀಗಳಿಂದ  ಬಂದವರೂ ಇz್ದÁರೆ.ಎ¯್ಲÁ ತರಹದ ಜನರಿz್ದÁರೆ. ಜನತಾದಳ, ಬಿಜೆಪಿ,ಕಮ್ಯುನಿಸ್ಟ್  ಹೀಗೆ ಎಲ್ಲ ಪಕ್ಷಗಳಿಂದವರಿದ್ದಾರೆ. ಹಿಂದುಳಿದವರನ್ನು ಕಡೆಗಣಿಸುತ್ತಿದ್ದಾರೆ ಸಿಎಂ  ಎನ್ನುವುದನ್ನು ಅವರನ್ನೇ ಕೇಳಬೇಕು ಅಷ್ಟೆ ಎಂದು ನುಡಿದರು.
ಸಿಎಂ ಸಿದ್ದರಾಮಯ್ಯ ಮತ್ತು  ಬಸವರಾಜ ರಾಯರೆಡ್ಡಿ  ಅವರು ಖಾಸಗಿ ಸ್ನೇಹಿತರು. ರಾಯರೆಡ್ಡಿ ಅವರು ಸಿಎಂಗೆ ಪತ್ರ ಬರೆದಿದ್ದನ್ನು  ಅವರಿಗೆ ಕೇಳಬೇಕು. ನಾನು ರಾಯರೆಡ್ಡಿಯವರ  ಸ್ಪೋಕ್ಸ್ ಪರ್ಸನ್ ಅಲ್ಲ, ರಾಯರೆಡ್ಡಿ ಅವರ ಪರಿಸ್ಥಿತಿ ಅವರನ್ನೇ ಕೇಳುವುದು ಒಳ್ಳೆಯದ್ದು ಎದು ಪ್ರಶ್ನೆಯೊಂದಕ್ಕೆ ಹರಿಪ್ರಸಾದ ಉತ್ತರಿಸಿದರು.
ಕಾಂಗ್ರೆಸ್ ಪP್ಷÀ ವೈe್ಞÁನಿಕ ನೆಲೆಗಟ್ಟಿನಲ್ಲಿ ನಂಬಿಕೆ ಇಟ್ಟುಕೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ೧೯೮೧ರಲ್ಲಿ ಕಂದಾಯ ಸಚಿವರಾಗಿz್ದÁಗ ಪೀಣ್ಯದಲ್ಲಿ ಇಸ್ರೋಗೆ ಜಾಗ ಕೊಟ್ಟವರು. ಅದನ್ನು ಮರೆಯೋಕೆ ಆಗಲ್ಲ, ನಾವು ಪ್ರಚಾರ ತೆಗೆದುಕೊಂಡಿರಲಿಲ್ಲ. ಬರಿ ಕೆಲಸ ಮಾಡಿz್ದÉÃವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net