ಕೇಂದ್ರ ಸಚಿವ ಸ್ಥಾನ ರುಚಿಸುತ್ತಿಲ್ಲ

FotoJet
Published on

ಎಚ್‌ಡಿಕೆಗೆ ರಾಜ್ಯ ರಾಜಕೀಯದಲ್ಲೇ ಹೆಚ್ಚು ಆಸಕ್ತಿ - ಸಚಿವ ಡಾ. ಎಂ.ಸಿ. ಸುಧಾಕರ್ ವ್ಯಂಗ್ಯ

ಚಿಕ್ಕಬಳ್ಳಾಪುರ: ಎಚ್.ಡಿ. ಕುವಾರಸ್ವಾಮಿ ಅವರಿಗೆ ಕೇಂದ್ರ ಸರ್ಕಾರದ ಹಂತದಲ್ಲಿ ಕಾರ್ಯ ನಿರ್ವಹಣೆ ಇಷ್ಟವಾಗುತ್ತಿಲ್ಲ. ಭಾಷೆಯ ಕಿರಿಕಿರಿ ಸೇರಿ ಬೇರೆ ಸಮಸ್ಯೆಗಳಿರಬಹುದು. ಹಾಗಾಗಿ ರಾಜ್ಯಮಟ್ಟಕ್ಕೆ ಬಂದು ರಾಜಕೀಯ ವಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ವ್ಯಂಗ್ಯವಾಡಿದರು.


ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ವಾತನಾಡಿದ ಅವರು, ಕುವಾರಸ್ವಾಮಿ ತಟ್ಟೆಯಲ್ಲಿಯೇ ದೊಡ್ಡ ಹೆಗ್ಗಣ ಬಿದ್ದಿದೆ. ಆದರೆ, ಅವರು ಬೇರೆಯವರ ತಟ್ಟೆಯಲ್ಲಿ ನೊಣ ಇರುವುದನ್ನು ಹುಡುಕುತ್ತಿದ್ದಾರೆ. ಹಿಂದೆ ರಾಜ್ಯ ರಾಜಕಾರಣದಲ್ಲಿದ್ದವರು. ಬಹುಶಃ ಈಗ ಭಾಷೆ ಸಮಸ್ಯೆ, ರಾಷ್ಟ್ರ ರಾಜಕಾರಣ ಸೇರಿ ಹಲವು ಕಾರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸ್ಥಾನ ಅವರಿಗೆ ರುಚಿಸುತ್ತಿಲ್ಲವೇನೋ ಎಂದರು.


ಹೇಗಾದರೂ ವಾಡಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ, ಅಧಿಕಾರ ಹಿಡಿಯುವ ದಾಹದಲ್ಲಿ ಹಲವು ಆರೋಪಗಳನ್ನು ಮಾಡಲಾಗುತ್ತಿದೆ. ಮುಡಾದಲ್ಲಿ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇ.ಡಿ. ಮಧ್ಯ ಪ್ರವೇಶಿಸಿದೆ. ಇದು ಎದುರಾಳಿ ಪಕ್ಷದವರಿಗೆ ಮಾತ್ರ. ಬಿಜೆಪಿಯಲ್ಲಿರುವವರ ಎಲ್ಲ ಅವ್ಯವಹಾರಗಳು ವಾಷಿಂಗ್ ಮಷಿನ್‌ನಲ್ಲಿ ಕ್ಲೀನ್ ಆಗಿ ಬಿಡುತ್ತವೆೆ ಎಂದು ವ್ಯಂಗ್ಯವಾಡಿದರು.

ಕರೊನಾ- ಪೂರ್ಣ ವರದಿ ನಂತರ ಕ್ರಮ
ಈಗಾಗಲೇ ಕರೊನಾ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ವರದಿ ಸ್ವೀಕರಿಸಲಾಗಿದೆ. ಮೇಲ್ನೋಟಕ್ಕೆ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದು ಗೊತ್ತಾಗಿದೆ. ಆದರೂ ಪೂರ್ಣ ವರದಿ ಬಳಿಕವಷ್ಟೇ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡಿಕೊಳ್ಳುತ್ತಾರೆ ಎಂದು ಡಾ. ಎಂ.ಸಿ. ಸುಧಾಕರ್ ಹೇಳಿದರು.

ಮೇಲ್ಮನವಿ ಸಲ್ಲಿಸಲು ಚರ್ಚೆ
ರಾಜ್ಯದಲ್ಲಿ ಹೊಸದಾಗಿ 1242 ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಲಾಗಿದೆ. ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಇದರ ನಡುವೆ ಯುಜಿಸಿ ಆಧಾರದಲ್ಲಿ ಹುದ್ದೆ ನೇಮಕಾತಿಗೆ ನಿಯವಾನುಸಾರ ನೆಟ್, ಪಿಎಚ್.ಡಿ. ಸೇರಿ ಅಗತ್ಯ ಅರ್ಹತೆ ಹೊಂದಿರಬೇಕೆಂದು ನ್ಯಾಯಾಲಯದ ತೀರ್ಪು ಬಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ದೂರದಷ್ಟಿ, ಹೊಸ ಆದೇಶದನ್ವಯ ಕ್ರಮ ಕೈಗೊಳ್ಳಬೇಕಾಗಿದೆ. ಇದರ ನಡುವೆ ತೀರ್ಪನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ಅತಿಥಿ ಉಪನ್ಯಾಸಕರನ್ನು ವರ್ಗಾವಣೆಯ ಮೂಲಕ ಕಾಲೇಜಿಗೆ ನಿಯೋಜಿಸುವ ಕೆಲಸವಾಗುತ್ತಿದೆ. ಆದಷ್ಟು ಬೇಗ ಬೋಧನಾ ಸಮಸ್ಯೆ ನಿವಾರಣೆಯಾಗಲಿದೆ. ನಿಯವಾನುಸಾರ ಪ್ರತಿಬಾರಿ 10 ತಿಂಗಳ ಅವಧಿಗೆ ನೇಮಕಾತಿ, ಹಿಂದಿನ ಸೆಮಿಸ್ಟರ್‌ಗಳ ಏರುಪೇರಿನ ಗೊಂದಲಗಳಿಂದ ಸಮಸ್ಯೆಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net