ಒಂದು ಜಾತಿಗೆ ಸೀಮಿತವಾಗಿಲ್ಲ

ಕನಕಗಿರಿಯ ಭಗೀರಥ ವೃತ್ತದಲ್ಲಿ ಭಗೀರಥ ಜಯಂತಿ ಕಾರ್ಯಕ್ರಮ ನಡೆಯಿತು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಪ್ರಮುಖರಾದ ನಾಗೇಶ ಉಪ್ಪಾರ, ಶಿವಪ್ಪ ಕಟ್ಟಿಮನಿ, ಗಂಗಾಧರ ಚೌಡ್ಕಿ ಇತರರಿದ್ದರು.
ಕನಕಗಿರಿಯ ಭಗೀರಥ ವೃತ್ತದಲ್ಲಿ ಭಗೀರಥ ಜಯಂತಿ ಕಾರ್ಯಕ್ರಮ ನಡೆಯಿತು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಪ್ರಮುಖರಾದ ನಾಗೇಶ ಉಪ್ಪಾರ, ಶಿವಪ್ಪ ಕಟ್ಟಿಮನಿ, ಗಂಗಾಧರ ಚೌಡ್ಕಿ ಇತರರಿದ್ದರು.
Published on

ಕನಕಗಿರಿ: ಭಗೀರಥ ಮಹರ್ಷಿಗಳು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.

ನಗರದ ಮಹರ್ಷಿ ಭಗೀರಥ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಗೀರಥರು ಶಿವನ ಜಟೆಯಿಂದ ಗಂಗೆಯನ್ನು ಭೂಮಿಗೆ ಇಳಿಸಿದರು. ಅದರ ಫಲವಾಗಿ ಯಾವುದೇ ಕಷ್ಟದ ಕೆಲಸ ಯಶಸ್ವಿಯಾದಾಗ ಭಗೀರಥದ ಯತ್ನದಿಂದ ಸಾಧನೆ ಮಾಡಿದಂತಾಗಲಿದೆ ಎಂದರು.

ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಮಾತನಾಡಿ, ಭಗೀರಥ ಸಮುದಾಯ ಎಲ್ಲರೊಂದಿಗೆ ಬೆರೆತು ಸಾಮರಸ್ಯದಿಂದ ಜೀವಿಸುತ್ತಾರೆ. ಒಗ್ಗಟ್ಟಿನಿಂದ ಸಮುದಾಯ ಭವನಕ್ಕೆ ಜಾಗ ಪಡೆದು ಸರ್ಕಾರದ ಅನುದಾನದಿಂದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿದರು. ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯರಾದ ಅಭಿಷೇಕ ಕಲುಬಾಗಿಲಮಠ, ಹನುಮಂತ ಬಸರಿಗಿಡ, ಸಮಾಜದ ತಾಲೂಕು ಘಟಕದ ಅಧ್ಯಕ್ಷ ಚಿನ್ನಪ್ಪ ಕಲ್ಗುಡಿ ಕ್ಯಾಂಪ್, ಪ್ರಮುಖರಾದ ನಾಗೇಶ ಉಪ್ಪಾರ, ಶಿವಪ್ಪ ಕಟ್ಟಿಮನಿ, ದುರ್ಗೇಶ ಗದ್ದಿ, ಕೃಷ್ಣಪ್ಪ ಗದ್ದಿ, ರಮೇಶ ಕಲ್ಗುಡಿ, ಯಂಕಪ್ಪ ಮ್ಯಾಗಡೆ, ಶಿವಪ್ಪ ಪೂಜಾರ, ನಾಗರಾಜ ಪೂಜಾರ, ಪ್ರಾಣೇಶ ಪೂಜಾರ, ತಿಮ್ಮಣ್ಣ ಕಾಟಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net