

ಕಲಬುರಗಿ : ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎರಡನೇ ಸುತ್ತಿನ ಮತ ಎಣಿಕೆ ಈಗ ಮುಗಿದಿದ್ದು ಬಿ.ಜೆ.ಪಿ. ಅಭ್ಯರ್ಥಿ ಅಮರನಾಥ ಪಾಟೀಲ ಅವರು 8,732 ಮತಗಳು ಪಡೆದಿದ್ದು, 309 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲ ಸಹ ಮುಂದೆ ಇದ್ದರು.
ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ 8,423 ಮತಗಳನ್ನು ಹಾಗೂ ಸ್ವತಂತ್ರ ಅಭ್ಯರ್ಥಿ ಎನ್.ಪ್ರತಾಪರೆಡ್ಡಿ ಅವರು 6,163 ಮತ ಪಡೆದಿದ್ದಾರೆ. 3,429 ಮತಗಳು ತಿರಸ್ಕೃತಗೊಂಡಿವೆ.ಇದೂವರೆಗೆ ಒಟ್ಟಾರೆ 27,981 ಮತಗಳ ಎಣಿಕೆ ಪೂರ್ಣ ಆಗಿದೆ. ಮೂರನೇ ಸುತ್ತು ಆರಂಭಾಗಿದೆ