ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಮಲಾರ್ ಯಾದ್ ಫೌಂಡೇಶನ್ ವತಿಯಿಂದ ಜ.20ರಂದು ರಾತ್ರಿ 7ಕ್ಕೆ ಪಾವೂರು ಗ್ರಾಮದ ಮಲಾರ್ ಜಂಕ್ಷನ್‌ನಲ್ಲಿ ‘ನೂರೇ ಅಜ್ಮೀರ್’ ಆಧ್ಯಾತ್ಮಿಕ ಸಂಗಮ ನಡೆಯಲಿದೆ ಎಂದು ಯಾದ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ನಿಸಾರ್ ಮಲಾರ್ ತಿಳಿಸಿದ್ದಾರೆ.
ಸಯ್ಯದ್ ಅಮೀರ್ ತಂಙಳ್ ಕಿನ್ಯ ದುವಾ ನೆರವೇರಿಸಲಿದ್ದು, ಸಯ್ಯದ್ ಶರಪುದ್ದಿನ್ ತಂಙಳ್ ಉದ್ಘಾಟಿಸಲಿದ್ದಾರೆ. ವಲಿಯುದ್ದೀನ್ ಪೈಜಿ ಉಸ್ತಾದ್ ವಾಜಿಕ್ಕಾಡ್ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮದ ನೇತೃತ್ವ ವಹಿಸಲಿದ್ದಾರೆ. ಸಯ್ಯದ್ ಇಜಾಜ್ ಹುಸೈನ್ ಜಿಸ್ತಿ ಅಜ್ಮಿರ್ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಲಿದ್ದಾರೆ. ಯಾದ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ನಿಸಾರ್ ಮಲಾರ್ ಅಧ್ಯಕ್ಷತೆ ವಹಿಸಲಿದ್ದು, ಸ್ಪೀಕರ್ ಯು.ಟಿ.ಖಾದರ್ ಫರೀದ್, ಕರ್ನಾಟಕ ಸ್ಟೇಟ್ ಅಲೈಡ್ ಆ್ಯಂಡ್ ಸ್ಟೇಟ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಫರೀದ್, ಬೆಂಗಳೂರು ನೈಶ್ ಕಾಲೇಜಿನ ಅಧ್ಯಕ್ಷ ಯು.ಟಿ.ಜುಲ್ಫಿಕರ್ ಫರೀದ್, ಉದ್ಯಮಿ ಹಮೀದ್ ಕಣ್ಣೂರು, ತಾ.ಪಂ. ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು ಮಲಾರ್, ಪಾವೂರು ಗ್ರಾಪಂ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಾದ್ ಫೌಂಡೇಶನ್ ಗೌರವಾಧ್ಯಕ್ಷ ಹಾಮದ್ ಅಲ್ತಾಫ್, ಪ್ರಧಾನ ಸಂಚಾಲಕ ರಿಯಾಝ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ರಿಯಾಝ್ ಎನ್., ಸದಸ್ಯರಾದ ಹನೀಫ್ ಕೆ.ಎಂ., ಇರ್ಫಾನ್ ಮಲಾರ್, ಹನೀಫ್ ಕುಂಜತ್ತೂರು ಗೋಷ್ಠಿಯಲ್ಲಿದ್ದರು.